ಮಂಗಳೂರು(ಡಿ.೦೮): ಈ ಬಾರಿಯ ಪುಟ್ಟಣ್ಣ ಕುಲಾಲ್ ಯುವಕವಿ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಯಾದ ಹಿರಿಯಡ್ಕ ವಿಷ್ಣು ಪ್ರಸಾದ್ ಕೋಡಿಬೆಟ್ಟು ಅವರ ಕವನಕ್ಕೆ ನೀಡಲಾಗಿದೆ.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು, ಕುಂದಪ್ರಭ ಕುಂದಾಪುರ ಹಾಗೂ ಆಕಾಶವಾಣಿ ಮಂಗಳೂರು ಇವರ ಸಹಯೋಗದಲ್ಲಿ ಡಿ. ೭ರಂದು ಬುಧವಾರ ಕುಂದಾಪುರ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅವಿಭಜಿತ ದಕ ಜಿಲೆಯಲ್ಲದೆ ಕಾರವಾರ, ಹಾವೇರಿ, ಶಿವಮೊಗ್ಗ ಮುಂತಾದ ಜಿಲ್ಲೆಗಳಿಂದ ಸುಮಾರು 60 ಕ್ಕೊ ಅಧಿಕ ಕವನಗಳು ಬಂದಿದ್ದು ಕೊನೆಯ ಹತ್ತು ಕವಿಗಳನ್ನು ಅವರಕವನವನ್ನ ವಿಮರ್ಶಿಸಿ ವಿಷ್ಣು ಪ್ರಸಾದ್ ಬರೆದ `ನಡುರಾತ್ರಿಯಲ್ಲಿ’ ಕವನಕ್ಕೆ 2016 ರ ಸಾಲಿನ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿಯನ್ನು ನೀಡಲಾಯಿತು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅಧ್ಯಕ್ಷತೆಯನ್ನ ವಹಿಸಿದ್ದರು. ಆಕಾಶವಾಣಿ ಮಂಗಳೂರು ಇದರ ವಸಂತ್ ಕುಮಾರ ಪೆರ್ಲ ಉದ್ಘಾಟಿಸಿದರು. ಹೊನ್ನಾವರದ ನಾಗರೀಕ ಪತ್ರಿಕೆಯ ಸಂಪಾದಕರಾದ ಕೃಷ್ಣ ಮೂರ್ತಿ, ಅಂಕಣಕಾರ ಕೋಟ ಶಿವಾನಂದ ಕಾರಂತ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ, ಕವಿ ರಾಜೀವ ನಾಯಕ್, ಬಕುಲಾ ಸಾಹಿತ್ಯ ಕೂಟದ ಕವಿ ಉಪನ್ಯಾಸಕ ವಿಶ್ವನಾಥ ಕರಬ, ಕುಂದಪ್ರಭ ಪತ್ರಿಕೆಯ ಯು ಯಸ್ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಗು ಹಿರಿಕಿರಿಯ ಸಾಹಿತ್ಯಾಸಕ್ತರು ಕವನ ಗಳ ಸವಿಯುಂಡು ಪ್ರೋತ್ಸಾಹಿಸಿದರು.