ಹೆಬ್ರಿ(ನ.೨೭): ಅಂದಿನ ದಿನಗಳಲ್ಲಿ ಪಟ್ಟ ಕಷ್ಟ ಶ್ರಮ ಮತ್ತು ಹಿರಿಯರ ಪುಣ್ಯದ ಫಲದಿಂದ ಶಾಂತಿಯ ಜೀವನ ಮತ್ತು ಸಮಾಜದಲ್ಲಿ ವಿಶೇಷ ಗೌರವ ದೊರೆಯುತ್ತದೆ ಎಂದು ಜಯ ಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ಎಸ್.ಎಸ್.ತೋನ್ಸೆ ಹೇಳಿದರು.
ಅವರು ಭಾನುವಾರ ಪೆರ್ಡೂರು ಪಕ್ಕಾಲು ದೈವಾನುಗ್ರಹದಲ್ಲಿ ಸಮಾಜಸೇವೆಗಾಗಿ ಭಾರತ್ ಗೌರವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಕ್ಕಾಲು ರಾಮ ಕುಲಾಲ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು. ಬಿಜೆಪಿ ಉಡುಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಹೋರಾಟಗಾರ ಮುಟ್ಲುಪಾಡಿ ಸತೀಶ್ ಶೆಟ್ಟಿ, ಜಯ ಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಪ್ರಧಾನ ಸಂಚಾಲಕ ಹೆಬ್ರಿ ಅಣ್ಣಪ್ಪ ಕುಲಾಲ್, ಮುಖಂಡರಾದ ಕುರ್ಪಾಡಿ ಪ್ರವೀಣ್ ಕುಮಾರ್ ಶೆಟ್ಟಿ, ದಿನೇಶ್, ಮಣಿಪಾಲ ಘಟಕದ ಅಧ್ಯಕ್ಷ ಕರುಣಾಕರ ಮಾರ್ಪಳ್ಳಿ,ಪುಪ್ಪಾ ಕುಲಾಲ್, ಸಂತೋಷ್ ಕುಲಾಲ್, ಮಿಥುನ್ ಕುಲಾಲ್, ಶಶಿಕಿರಣ್ ಕುಲಾಲ್, ಸಪ್ನಾ ಕುಲಾಲ್ ಬೆಂಗಳೂರಿನ ಶ್ರೀಧರ ಕುಲಾಲ್, ಸುಕೇಶ್ ಕುಲಾಲ್, ಮುಂತಾದವರು ಉಪಸ್ಥಿತರಿದ್ದರು. ಹೆಬ್ರಿ ಅಣ್ಣಪ್ಪ ಕುಲಾಲ್ ಸ್ವಾಗತಿಸಿದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪೆರ್ಡೂರು ರಾಮ ಕುಲಾಲರಿಗೆ ಸನ್ಮಾನ
Kulal news
1 Min Read