ಕುಲಾಲ ಪ್ರತಿಷ್ಠಾನ ವತಿಯಿಂದ ಸನ್ಮಾನ-ನಾಟಕ ಪ್ರದರ್ಶನ
ಮುಂಬಯಿ (ನ. ೧೫) : ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ತುಳು ನಾಟಕದ ಜನಪ್ರಿಯ ಹಾಸ್ಯ ಕಲಾವಿದ ದಯಾನಂದ ಕುಲಾಲ್ ಅವರನ್ನು ’ತೆಲಿಕೆದ ಬಿರ್ಸೆ’ ಬಿರುದು ನೀಡಿ ಸನ್ಮಾನಿಸಲಾಯಿತು.
ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ “ಕಡಲ ಮಗೆ” ನಾಟಕ ಇತ್ತೀಚೆಗೆ ಮಾಟುಂಗಾದ ಮೈಸೂರು ಅಸೋಷಿಯೇಷನ್ ಸಭಾಗೃಹದಲ್ಲಿ ಪ್ರದರ್ಶನಗೊಂಡಿದ್ದು, ಈ ಸಂದರ್ಭದಲ್ಲಿ ಕಲಾವಿದ ದಯಾನಂದ ಕುಲಾಲ್ ಹಾಗೂ ಸಮಾಜ ಸೇವಕ ಆನಂದ ಬಿ. ಮೂಲ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಬಂಟರ ಸಂಘ ಮುಂಬಯಿಯ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿಯಾಗಿ ಉಪಸ್ಥಿತರಿದ್ದು ಸನ್ಮಾನಿತರನ್ನುದ್ದೇಶಿಸಿ ಮಾತನಾಡುತ್ತಾ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಕುಲಾಲ ಪ್ರತಿಷ್ಠಾನ ಸಮಾಜಪರ ಕಾರ್ಯಕ್ಕೆ ಶುಭ ಕೋರಿದರು.
ಮೊಗವೀರ ಬ್ಯಾಂಕಿನ ನಿರ್ದೇಶಕ ಗೋಪಾಲ್ ಪುತ್ರನ್ ಅವರು ಮಾತನಾಡುತ್ತಾ ಮೊಗವೀರರ ಜೀವನ ಶೈಲಿಯನ್ನು ಈ ನಾಟಕದಲ್ಲಿ ಕೊಡಿಯಾಲ್ ಬೈಲ್ ಅವರು ಅಳವಡಿಸಿದ್ದು ನಾಟಕದೊಂದಿಗೆ ಸಾಧಕರನ್ನು ಗುರುತಿಸಿ ಗೌರವಿಸಿದ ಕುಲಾಲ ಪ್ರತಿಷ್ಠಾನಕ್ಕೆ ಅಭಿನಂದನೆ ಸಲ್ಲಿಸಿದರು. ಅಂತರಾಷ್ಟೀಯ ಜ್ಯೋತಿಷಿ, ಪುರೋಹಿತ ಎಮ್. ಜೆ. ಪ್ರವೀಣ್ ಭಟ್ ಅವರು ಸನ್ಮಾನಿತರನ್ನು ಅಭಿನಂದಿಸುತ್ತಾ ’ತೆಲಿಕೆದ ಬಿರ್ಸೆ’ ದಯಾನಂದ ಕುಲಾಲ್ ಅಪ್ರತಿಮ ಹಾಸ್ಯ ಕಲಾವಿದರಾಗಿದ್ದು ಅವರಿಗಿತ್ತ ನಿಧಿಯಿಂದ ಅವರ ಮುಂದಿನ ಬಾಳಿಗೆ ಸಹಕಾರಿಯಾಗಲಿ ಎನ್ನುತ್ತಾ ಕುಲಾಲ ಪ್ರತಿಷ್ಠಾನ ದಿಂದ ಇಂತಹ ಕಾರ್ಯಗಳು ಮುಂದುವರಿಯುತ್ತಿರಲಿ ಎಂದರು.
ವೇದಿಕೆಯಲ್ಲಿ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್. ಶೆಟ್ಟಿ, ಪುರೋಹಿತ ಆರ್. ಎಲ್. ಭಟ್., ನ್ಯಾ. ಜಗನ್ನಾಥ ಶೆಟ್ಟಿ, ಭರತ್ ಕುಮಾರ್ ಪೊಲಿಪು, ಸಿಎ ಸುಧೀರ್ ಆರ್. ಎಲ್. ಶೆಟ್ಟಿ, ರಾಜ್ ಕುಮಾರ್ ಕಾರ್ನಾಡ್, ಶೇಖರ ಪೂಜಾರಿ, ಕೇದಗೆ ಸುರೇಶ್ ಶೆಟ್ಟಿ, ಎ. ಕೆ. ವಿಜಯ್, ಐತು ಆರ್. ಮೂಲ್ಯ, ರತ್ನಾ ಡಿ. ಕುಲಾಲ್, ರೂಪಾ ವಿ. ಶೆಟ್ಟಿ, ವನಿತಾ ಆರ್. ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಟಿ, ಪತ್ರಕರ್ತ ದಿನೇಶ್ ಕುಲಾಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.