ಉಡುಪಿ : ನವದೆಹಲಿಯ ಸಿಟಿಜನ್ ಇಂಟಿಗ್ರೇಷನ್ ಪೀಸ್ ಸೊಸೈಟಿ ನೀಡುವ ” ಭಾರತ್ ಗೌರವ ರಾಷ್ಟ್ರೀಯ ಪ್ರಶಸ್ತಿ”ಗೆ ಸಮಾಜ ಸೇವಕ, ಸಂಘಟಕರಾದ ಪೆರ್ಡೂರು ರಾಮ ಕುಲಾಲ್ ಆಯ್ಕೆಯಾಗಿದ್ದಾರೆ.
ವೃತ್ತಿಯಲ್ಲಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿರುವ ರಾಮ ಕುಲಾಲ್ ಅವರು ತಾನು ಬೆಳೆಯುವ ಜೊತೆಗೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ವಿಶೇಷ ಮುತುವರ್ಜಿಯಲ್ಲಿ ತನ್ನ ಅಂದಿನ ಬಡತನವನ್ನು ನೆನೆದು ಕಳೆದ 40 ವರ್ಷಗಳಿಂದ ಸಮಾಜ ಸೇವೆ, ಸಂಘಟನೆ, ಶೋಷಿತರ ಪರ ಹೋರಾಟದ ಮೂಲಕ ಜನಪರವಾಗಿ ರಾಮ ಕುಲಾಲ್ ಗುರುತಿಸಿಕೊಂಡಿದ್ದಾರೆ. ಬಡವರಿಗೆ ಶಿಕ್ಷಣ, ಆರೋಗ್ಯ, ಮದುವೆ ಮಾಡಲು ನೆರವು ನೀಡಿ ಜನಮನವನ್ನು ಗೆದ್ದಿದ್ದಾರೆ. ಪೆರ್ಡೂರು ಪರಿಸರದಲ್ಲಿ ಕುಲಾಲ ಸಮುದಾಯವನ್ನು ಎಲ್ಲರೊಂದಿಗೆ ಸೇರಿ ಯಶಸ್ವಿಯಾಗಿ ಸಂಘಟಿಸಿ ಭವ್ಯವಾದ ಕುಲಾಲ ಭವನದ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಪೆರ್ಡೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ, ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಬಳಿಕ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುಲಾಲ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾಗಿ ಸಮಾಜ ಅಭಿವೃದ್ದಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಜನಪರ ಸೇವೆ :
* ಪೆರ್ಡೂರು ಗ್ರಾಮದ ಪಾಡಿಗಾರದ ಗ್ರಾಮೀಣ ಜನರಿಗೆ ನೀರಿನ ಸಮಸ್ಯೆ ತಲೆದೊರಿದಾಗ ರಾಷ್ಟ್ರೀಯ ಹೆದ್ದಾರಿ ಬದಿಯ ಬೆಲೆಬಾಳುವ ತನ್ನ ಸ್ವಂತ ಜಾಗವನ್ನು ಕುಡಿಯುವ ನೀರಿನ ವ್ಯವಸ್ಥೆಗಾಗಿ ಗ್ರಾಮ ಪಂಚಾಯಿತಿಗೆ ದಾನವಾಗಿ ನೀಡಿದ್ದಾರೆ.
* ಶ್ರೀ ಕ್ಷೇತ್ರ ಕಲ್ಲಂಗಳದಲ್ಲಿ ಪ್ರತಿ ವರ್ಷ ನಡೆಯುವ ಷಷ್ಠಿ ಮಹೋತ್ಸವದಂದು ದೇವಸ್ಥಾನಕ್ಕೆ ತೆರಳಲು ಅಡ್ಡವಾಗಿದ್ದ ಹೊಳೆಗೆ ಜನರನ್ನು ಸಂಘಟಿಸಿ ತಡೆಗೋಡೆ ನಿರ್ಮಿಸಿ ದೇವಸ್ಥಾನದ ಜಾತ್ರೆಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ.
* ಕೌಟುಂಬಿಕ ಸಮಸ್ಯೆಯನ್ನು ಎದುರಿಸುತ್ತಿದ್ದ ಹಲವಾರು ದಂಪತಿಗಳನ್ನು, ಕುಟುಂಬಗಳನ್ನು ಪಂಚಾಯಿತಿಗೆಯ ಮೂಲಕ ಕುಟುಂಬವನ್ನು ಒಗ್ಗೂಡಿಸುವ ಮಹತ್ವದ ಕೆಲಸ ಮಾಡಿರುತ್ತಾರೆ.
* ಅನ್ಯಾಯಕ್ಕೊಳಗಾದವರ, ಬಡವರು, ಷೋಷಿತರು ಪರವಾಗಿ ಹೋರಾಟ ನಡೆಸುವುದು.
* ಅದೆಷ್ಟೋ ಮಂದಿ ಬಡವರಿಗೆ ಮದುವೆ ಮಾಡಿಸಿರುವುದು.
* ಮದುವೆ ನಿಶ್ಚಯವಾಗಿ ಸಮಸ್ಯೆಯನ್ನು ಅನುಭವಿಸಿದವರಿಗೆ ತಾನು ಮುಂದೆ ನಿಂತು ನೆರವು ಮಾಡಿರುವುದು.
* ಬಡವರ ಮನೆಯ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಸಹಾಯ
* ಆರ್ಥಿಕವಾಗಿ ಕಡು ಬಡತನದಲ್ಲಿದ್ದು ಮನೆ ನಿರ್ಮಿಸಲು ಅಸಾಧ್ಯವಾಗಿದ್ದವರಿಗೆ ಮನೆ ನಿರ್ಮಿಸಲು ವಿಶೇಷ ನೆರವು.
* ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ಕಲ್ಪಿಸಲು ಹಲವು ರಸ್ತೆಗಳ ನಿರ್ಮಾಣ.
* ಪರಿಸರದ ಮಂದಿ ಅನಾರೋಗ್ಯಕ್ಕೊಳಗಾದ ಸಂದರ್ಭ ಆರ್ಥಿಕ ನೆರವು, ಹಲವು ಮಂದಿಯ ಆಸ್ಪತ್ರೆಯ ಬಿಲ್ಲು
ಪಾವತಿಸಿ ಸಹಾಯ.
• ಅಫಘಾತ, ಅವಘಡ ಸಂದರ್ಭದಲ್ಲಿ ಸಹಾಯ, ತುರ್ತು ಚಿಕಿತ್ಸೆಗೆ ಸಹಾಯ.
* ಸರ್ಕಾರದ ವಿವಿಧ ಸವಲತ್ತುಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ.
ಜನಪ್ರತಿನಿಧಿಯಾಗಿ ಸೇವೆ :
• ಜನಪರವಾದ ಸೇವೆಯಿಂದಾಗಿ ಜನಪ್ರತಿನಿಧಿಯಾಗುವ ಸದಾವಕಾಶ ಒದಗಿ ಬಂದಿದೆ.
• ಉಡುಪಿ ತಾಲ್ಲೂಕು ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ.
• ಉಡುಪಿ ತಾಲ್ಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆ
• ಉಡುಪಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾಗಿ ದಕ್ಷತೆಯಲ್ಲಿ ಸೇವೆ.
ಸಮಾಜ ಸಂಘಟನೆ :
• ಉಡುಪಿ ತಾಲ್ಲೂಕು ಪೆರ್ಡೂರು ಮತ್ತು ಪರಿಸರದಲ್ಲಿ ವಿವಿಧ ಜನಪರ ಮತ್ತು ಸಾಮಾಜಿಕ ಸಂಘಸಂಸ್ಥೆಗಳಲ್ಲಿ ಸಕ್ರೀಯವಾಗಿ ಸೇವೆ.
• ಪೆರ್ಡೂರು ಮತ್ತು ಪರಿಸರದ ವಿವಿಧ ಗ್ರಾಮಗಳ ಆರ್ಥಿಕ, ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದ ಕುಲಾಲ ಸಮುದಾಯದ ಜನರನ್ನು ಸಂಘಟಿಸಿ ಪೆರ್ಡೂರು ಕುಲಾಲ ಸಮಾಜ ಸೇವಾ ಸಂಘದ ಮೂಲಕ ತನ್ನ ಸಮುದಾಯಕ್ಕೊಂದು ಗ್ರಾಮೀಣ ಪ್ರದೇಶದಲ್ಲಿ ಭದ್ರ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿ.
• ಪೆರ್ಡೂರು ಕುಲಾಲ ಸಂಘವನ್ನು ವಿವಿಧ ಜವಾಬ್ಧಾರಿಯ ಮೂಲಕ ಯಶಸ್ವಿಯಾಗಿ ಮುನ್ನಡೆಸಿದ ಹೆಮ್ಮೆ.
• ಪೆರ್ಡೂರು ಪರಿಸರದ ಕುಲಾಲ ಸಮಾಜದ ಬಂಧುಗಳಿಗೆ ಸುಲಭದಲ್ಲಿ ಶುಭ ಸಮಾರಂಭ ನಡೆಸಲು ಮತ್ತು ಸಮಾಜದ ಬಂಧುಗಳು ಒಂದೆಡೆ ಸೇರುವಂತಾಗಲು ಎಲ್ಲರ ಸಹಕಾರದಲ್ಲಿ ವಿಶಾಲ ಜಾಗದಲ್ಲಿ ಸಕಲ ವ್ಯವಸ್ಥೆಯ ಭವ್ಯವಾದ ಕುಲಾಲ ಸಮುದಾಯ ಭವನದ ನಿರ್ಮಾಣ.
• ಪೆರ್ಡೂರಿನಲ್ಲಿ ಸಮಾಜದ ಮುಖಂಡರ ಜೊತೆ ಸೇರಿ ಕುಲಾಲ ಸಮಾಜದ ಸಮಾವೇಶ ನಡೆಸಿ ರಾಜಕೀಯ ಸ್ಥಾನಮಾನ ಸೇರಿ ಕುಲಾಲ ಸಮುದಾಯವನ್ನು ಮುಖ್ಯ ವಾಹಿನಿ ತರಲು ವಿಶೇಷ ಮುತುವರ್ಜಿ.
* ಉಡುಪಿ ಜಿಲ್ಲೆಯಾದ್ಯಂತ ಸಂಘಟನೆಯ ಬಲವರ್ಧನೆ ಮಾಡಿರುತ್ತಾರೆ.
ಕುಲಾಲ ಸಮಾಜದಲ್ಲಿ ಸಕ್ರೀಯ :
• ಪೆರ್ಡೂರು ಕುಲಾಲ ಸಂಘದ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸಕ್ರೀಯ ಸೇವೆ.
• ಉಡುಪಿ ಜಿಲ್ಲಾ ಕುಂಬಾರರ ಸಂಘದ ಜಿಲ್ಲಾ ಜಿಲ್ಲಾಧ್ಯಕ್ಷರಾಗಿ ಸೇವೆ.
• ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ.
ಪ್ರಸ್ತುತ ಕುಲಾಲರು ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನವಂಬರ್ 20 ರಂದು ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮಾಜಿ ರಾಜ್ಯಪಾಲರಾದ ಡಾ.ಭೀಷ್ಮ ನಾರಾಯಣ ಸಿಂಗ್ ಪ್ರಶಸ್ತಿ ಪ್ರಧಾನ ಮಾಡುವರು. ಭಾರತ ಚುನಾವಣಾ ಆಯೋಗದ ಮಾಜಿ ಆಯುಕ್ತ ಜಿ.ವಿ.ಜಿ. ಕೃಷ್ಣಮೂರ್ತಿ, ವೇದಪ್ರಕಾಶ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸುವರು.