ಪುತ್ತೂರು(ನ.೦೬): ಪುತ್ತೂರು ಕುಲಾಲ ಸಮಾಜ ಸೇವಾ ಸಂಘ ಹಾಗೂ ಕುಲಾಲ ಸಮಾಜ ಮಹಿಳಾ ಘಟಕದ ವತಿಯಿಂದ ನವೆಂಬರ್ 13, ಆದಿತ್ಯವಾರದಂದು ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಲಿದೆ.
ನೆಹರೂ ನಗರದಲ್ಲಿರುವ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟವನ್ನು ಮಂಗಳಾ ಫಿಸಿಯೋಥೆರಪಿ ಕ್ಲಿನಿಕ್ ನ ಡಾ. ರಕ್ಷಿತ್ ಬಂಗೇರ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ದಿನೇಶ್ ಪಿ ವಿ ಅಧ್ಯಕ್ಷತೆವಹಿಸಿದರೆ, ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ. ಧರ್ಣಪ್ಪ ಮೂಲ್ಯ ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಮಕ್ಕಳಿಗೆ ಸಂಗೀತ ಕುರ್ಚಿ, ಕಪ್ಪೆ ಜಿಗಿತ, ವಿಕೇಟಿಗೆ ರಿಂಗ್ ಹಾಕುವುದು ಮುಂತಾದ ಸ್ಪರ್ಧೆ ನಡೆಯಲಿದ್ದರೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಓಟದ ಸ್ಪರ್ಧೆ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ ಚಕ್ರ ಎಸೆತ, ವಾಲಿಬಾಲ್, ಹಗ್ಗ ಜಗ್ಗಾಟ, ತ್ರೋ ಬಾಲ್ ಮುಂತಾದ ಸ್ಪರ್ಧೆ, ಹಿರಿಯ ನಾಗರಿಕರಿಗೆ ಕಾಲ್ನಡಿಗೆ ಮತ್ತು ಗುಂಡು ಎಸೆತ, ಚಕ್ರ ಎಸೆತ ಸ್ಪರ್ಧೆ ನಡೆಯಲಿದೆ.
ನವೆಂಬರ್ 13ರಂದು ಪುತ್ತೂರು ಕುಲಾಲ ಸಂಘದ ವತಿಯಿಂದ ತಾಲೂಕು ಮಟ್ಟದ ಕ್ರೀಡಾಕೂಟ
sports
1 Min Read

