ಮಂಗಳೂರು(ನ.೦೧) : ಸಂಘಟನಾತ್ಮಕವಾಗಿ ಕುಲಾಲ ಯುವ ವೇದಿಕೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸಮಿತಿ ಹಾಗೂ ದ. ಕ ಜಿಲ್ಲಾ ಸಮಿತಿಯ ಸದಸ್ಯರ ಜೊತೆ ಸಮಾಲೋಚನಾ ಸಭೆಯು ಇತ್ತೀಚೆಗೆ ನಡೆಯಿತು.
ಈ ಸಭೆಯಲ್ಲಿ ಕುಲಾಲ್ ಯುವ ವೇದಿಕೆ ಕುಡ್ಲ (ಮಂಗಳೂರು ನಗರ ದಕ್ಷಿಣ ) ಪದಾಧಿಕಾರಿಗಳ ಆಯ್ಕೆ , ಸಂಘಟನೆಯ ವತಿಯಿಂದ ಜರುಗುವ ಸರ್ವಜ್ಞ ಜಯಂತಿ, ಸರ್ವಜ್ಞ ಕ್ರಿಕೆಟ್ ಮ್ಯಾಚ್, ನಾಯಕತ್ವ ತರಬೇತಿ ಶಿಬಿರ, ಕುಲಾಲ ಕುಂಬಾರ ಸಮುದಾಯದ ರಂಗ ಮತ್ತು ಸಿನಿಮಾ ಕಲಾವಿದರ ಪರಿಚಯ ಮತ್ತು ಸಮ್ಮಿಲನ ಕಾರ್ಯಕ್ರಮಗಳ ಬಗ್ಗೆ
ಚರ್ಚಿಸಲಾಯಿತು. ಮಂಗಳೂರು (ಉಳ್ಳಾಲ ) ವಿಧಾನಸಭೆ ವ್ಯಾಪ್ತಿಯಲ್ಲೂ ಇದೇ ಮಾದರಿಯ ಸಭೆ ನಡೆಸಿ ಪದಾಧಿಕಾರಿಗಳಿಗೆ ಸಂಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು.
ಕರಾವಳಿಯ ಎಲ್ಲಾ ಜಿಲ್ಲೆ ಹಾಗು ತಾಲೂಕುಗಳಲ್ಲಿ ಕುಲಾಲ ಯುವ ವೇದಿಕೆಗೆ ಹೊಸ ಹೊಸ ಚಿಂತನೆಯ, ಹೊಸ ಹುರುಪಿನ ಯುವಕರ ಸೇರ್ಪಡೆಗೊಳಿಸಿ ಮತ್ತಷ್ಟು ಬಲಿಷ್ಠ ಗೊಳಿಸಲು ತೀರ್ಮಾನಿಸಲಾಯಿತು.
ಯುವ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಡಾ ಎಂ ಅಣ್ಣಯ್ಯ್ ಕುಲಾಲ, ಹಿರಿಯ ಮಾರ್ಗದರ್ಶಕರಾದ ಮಹಾಬಲ ಮಾಸ್ಟರ್, ಸುಜೀರ್ ಕುಡುಪು, ನಿಕಟಪೂರ್ವ ವಲಯಾಧ್ಯಕ್ಷರಾದ ಗಂಗಾಧರ್ ಬಂಜನ್ , ಕಾರ್ಯಾಧ್ಯಕ್ಷರಾದ ಅಶೋಕ ಕುಲಾಲ, ದ.ಕ. ಜಿಲ್ಲಾ ಅಧ್ಯಕ್ಷರಾದ ಜಯೇಶ್ ಗೋವಿಂದ, ಸಂಘಟಕರಾದ ಗಣೇಶ್ ಎಂ, ಪ್ರಶಾಂತ್ ಶಕ್ತಿನಗರ, ಪ್ರವೀಣ್ ಬಸ್ತಿ , ಗಣೇಶ್ ಕಾಪಿಕಾಡು ಉಳ್ಳಾಲದ ಅಧ್ಯಕ್ಷರಾದ ಹೇಮಚಂದ್ರ ಕೈರಂಗಳ ಮುಂತಾದವರು ಉಪಸ್ಥಿತರಿದ್ದರು.