ಮಂಗಳೂರು(ಅ.೨೮): ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ಇದರ ತಾಲೂಕು ಶಾಖೆಯನ್ನು ತೆರಯುವ ಕುರಿತು ಸಮಾಲೋಚನಾ ಸಭೆಯು ಇತ್ತೀಚೆಗೆ ಕ.ರಾ ಸ ನೌ.ಸಂಘದ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗಡಿ ಭದ್ರತಾ ಪಡೆಯ ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಜಾತಿ ಬಾಂಧವರನ್ನು ಸಶಕ್ತಗೊಳಿಸಿ ಅವರ ಮಕ್ಕಳಿಗೆ ಭವಿಷ್ಯವನ್ನು ರೂಪಿಸುವ ಸಲುವಾಗಿ ಸಂಘ ಸ್ಥಾಪನೆಯಾಗಿದೆ. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರಿಸುವ ಮೂಲಕ ಸಂಘವನ್ನು ಬಲಪಡಿಸೋಣ ಎಂದರು.
ಸಂಘದ ರಾಜ್ಯ ನಿರ್ದೇಶಕರಾದ ಆನಂದ ಬಂಜನ್ ರವರು ಮಾತನಾಡಿ, ನಮ್ಮ ಮಕ್ಕಳನ್ನು ಐಎಎಸ್/ ಐಪಿಎಸ್ ನಂತಹ ಪರೀಕ್ಷೆ ಪಾಸು ಮಾಡಲು ತರಬೇತಿ ನೀಡಬೇಕಾಗಿದೆ. ಈ ಮೂಲಕ ಸಂಘದ ರಾಜ್ಯ ಅಧ್ಯಕ್ಷರಾದ ಆರ್ ಶ್ರೀನಿವಾಸರವರ ಕನಸನ್ನು ನನಸಾಗಿಸೋಣ ಎಂದರು. ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಜಯರಾಜ ಪ್ರಕಾಶ ಹಾಗೂ ಕಾರ್ಯದರ್ಶಿ ವಿಶ್ವನಾಥ ಬೈಲಮೂಲೆ ಸಂಘದ ಸದಸ್ಯತ್ವ ಅಭಿಯಾನದ ಬಗ್ಗೆ ಮಾತನಾಡಿದರು.ಇನ್ನೋರ್ವ ಜಿಲ್ಲಾ ಉಪಾಧ್ಯಕ್ಷರಾದ ಟಿ.ಶೇಷಪ್ಪ ಮಾಸ್ತರರವರು ಸ್ವಾಗತಿಸಿ ಪ್ರಸ್ತಾವಿಸಿದರು.ತಾಲೂಕು ನಿರ್ದೇಶಕರಾದ ರವಿಚಂದ್ರ ಅವರು ವಂದಿಸಿ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿದರು.
ಕರಾವಳಿ ಕುಂಬಾರರ ಮಹಿಳಾ ಸಂಘದ ತಾಲೂಕು ಉಪಾಧ್ಯಕ್ಷರಾದ ಭಾರತಿ ಶೇಷಪ್ಪ ಉಪಸ್ಥಿತರಿದ್ದರು. ತಾಲೂಕಿನ ಹೆಚ್ಚಿನ ಕುಂಬಾರ ನೌಕರರು ಹಾಜರಿದ್ದರು.
ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಮಾಲೋಚನಾ ಸಭೆ
Kulal news
1 Min Read