ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ದೀಪಾವಳಿ ಎಂದರೆ ದೀಪಗಳ ಹಬ್ಬ. ಅದು ದೀಪಗಳ ಹಬ್ಬ ಮಾತ್ರವೇ ಆಗಲಿ, ಬದಲಿಗೆ ಶಬ್ಧ ಹಾಗೂ ಹೊಗೆಯ ಹಬ್ಬ ಆಗುವುದು ಬೇಡ. ಆದ್ದರಿಂದ ದಯವಿಟ್ಟು ಪಟಾಕಿಗಳನ್ನು ಸುಡಬೇಡಿ. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ ಹಾಗೂ ಎಲ್ಲರ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸಿ.
ಹಾಗೆಯೇ ಇನ್ನೊಂದು ವಿಚಾರ, ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸುವುದು ಸಾಮಾನ್ಯ. ಆದರೆ ನಾವು ಯಾವುದರಲ್ಲಿ ದೀಪ ಬೆಳಗುತ್ತೇವೆ ಎನ್ನುವುದೂ ಮುಖ್ಯ. ದೀಪ ಉರಿಸಲು ಪಿಂಗಾಣಿ ಹಣತೆಗಳ ಬದಲಿಗೆ ಮಣ್ಣಿನ ಹಣತೆಗಳನ್ನು ಬಳಸಿ. ಇದರಿಂದ ಹಣತೆ ತಯಾರಿಸಿ ಜೀವನ ಸಾಗಿಸುವ ಕುಂಬಾರರಿಗೂ ಸಹಾಯವಾಗುತ್ತದೆ ಹಾಗೂ ನಾವು ಬೆಳಗಿಸಿದ ದೀಪಕ್ಕೂ ಒಂದು ಶ್ರೇಷ್ಠತೆ ಇರುತ್ತದೆ.
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿಯು ನಿಮ್ಮ ಮನೆ – ಮನಗಳನ್ನು ಬೆಳಗಿಸಲಿ ಎಂದು ಹಾರೈಸುತ್ತೇನೆ.
ದಿನೇಶ್ ಬಂಗೇರ ಇರ್ವತ್ತೂರು
(ವ್ಯವಸ್ಥಾಪಕ ಸಂಪಾದಕ)