ಉಡುಪಿ (ಅ.೨೫): ಕುಲಾಲ ಸಂಘ ನಾನಿಲ್ತಾರ್ (ರಿ.) ಮುಲ್ಲಡ್ಕ ಮುಂಡ್ಕೂರು ಇದರ ವತಿಯಿಂದ ನಿರ್ಮಾಣವಾದ ನೂತನ ಸಮುದಾಯ ಭವನದ ಉದ್ಘಾಟನೆಯು ನವೆಂಬರ್ 27ರ ರವಿವಾರದಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಇತ್ತೀಚೆಗೆ ನಡೆಯಿತು.
ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯಿಲಿ ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಮಾಣಿಲ ಮೋಹನದಾಸ ಸ್ವಾಮೀಜಿ, ಬೆಳ್ಮ ಣ್ ಚರ್ಚ್ ನ ಧರ್ಮಗುರು ಸುನಿಲ್ ವೇಗಸ್, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಳದ ಅರ್ಚಕ ರಾಮ್ ದಾಸ್ ಆಚಾರ್ಯ ಆಶೀರ್ವಚನ ನೀಡಲಿದ್ದಾರೆ. ಉದ್ಭವ ರೌದ್ರನಾಥೇಶ್ವರ ಕ್ಷೇತ್ರ ನಡುಬೊಟ್ಟು ಇದರ ಧರ್ಮದರ್ಶಿ ರವಿ ಎನ್ ಶುಭಾಶಂಶನೆಗೈಯುವರು.
ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷ ಮಂಜಪ್ಪ ಮೂಲ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪಾಕಶಾಲೆ ಉದ್ಘಾಟನೆಯನ್ನು ಮುಂಬಯಿಯ ಎಂ.ಜಿ ಕರ್ಕೇರ ನಡೆಸಿದರೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ಮರಣ ಸಂಚಿಕೆಯ ಬಿಡುಗಡೆಗೊಳಿಸಲಿದ್ದಾರೆ.
ಅದೇ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ನಾನಿಲ್ತಾರ್ ಕುಲಾಲ ಸಂಘದ ಗೌರವಾಧ್ಯಕ್ಷ ಐತು ಆರ್ ಮೂಲ್ಯ ನಡೆಸಲಿದ್ದಾರೆ. ಸಂಘದ ಅಧ್ಯಕ್ಷ ಮಂಜಪ್ಪ ಮೂಲ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬಯಿ ಕುಲಾಲ ಸಂಘದ ದೇವದಾಸ ಕುಲಾಲ್, ರಘು ಮೂಲ್ಯ, ಉದ್ಯಮಿ ಎನ್ ಡಿ ಮೂಲ್ಯ, ವಸಂತ ಬಂಗೇರ, ರವೀಂದ್ರ ಶೆಟ್ಟಿ, ಸುಭೋದ್ ಶೆಟ್ಟಿ, ಶೇಖರ್ ಶೆಟ್ಟಿ, ಶಂಭು ಮೂಲ್ಯ, ಲಕ್ಷ್ಮಣ್ ಮೂಲ್ಯ, ದಿನೇಶ್ ಕುಲಾಲ್, ಸುರೇಶ ಕುಲಾಲ್, ನಾರಾಯಣ ಸಫಲಿಗ, ಕರುಣಾಕರ ದೇವಾಡಿಗ, ಶ್ರೀಧರ ಸನಿಲ್, ಕೃಷ್ಣ ಸಾಲ್ಯಾನ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷ-ಗಾನ-ವೈಭವ, ನೃತ್ಯ ವೈವಿಧ್ಯ, ತುಳು ನಾಟಕ ನಡೆಯಲಿದೆ.