ಮಂಗಳೂರು(ಅ.೨೪): ಭಾರತೀಯ ವೈದ್ಯಕೀಯ ಸಂಸ್ಥೆಯ ರಾಷ್ಟ್ರ ಘಟಕ ನವದೆಹಲಿಯು ಕಳೆದ ನಾಲ್ಕಾರು ದಶಕಗಳಿಂದ ಜನಜಾಗೃತಿಗಾಗಿ ಹಮ್ಮಿಕೊಂಡಿರುವ “ಹೆಣ್ಣು ಶಿಶು ಉಳಿಸಿ” ಆಂದೋಲನದ ಭಾಗವಾಗಿ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯನಾಗಿ ಕರಾವಳಿ ಮಲೆನಾಡು ಜಿಲ್ಲೆಗಳ ಸಂಯೋಜಕನಾಗಿ ಕಳೆದ 5 ವರ್ಷಗಳಿಂದ ಬರಹ, ಭಾಷಣ, ಬ್ಯಾನರ್, ಕರಪತ್ರ ಕಾರ್ಯಕ್ರಮಗಳಿಂದ ಐ.ಎಂ.ಎ ಕುಟುಂಬ ವೈದ್ಯರ ಸಂಘಟನೆ, ಕುಲಾಲ್ ಹೆಲ್ತ್ ಸೆಂಟರ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಯುವಕ ಮಂಡಲ, ಕನ್ನಡ ಕಟ್ಟೆ, ಮಹಿಳಾ ಮತ್ತು ಮಕ್ಕಳ ಹಕ್ಕು ಆಯೋಗದ ಸಹಯೋಗಗಳಲ್ಲಿ ಮಾಡಿದ ಸಮಾಜಮುಖಿ ಜನಜಾಗೃತಿ ಮೂಡಿಸುತ್ತಿರುವುದನ್ನು ಪರಿಗಣಿಸಿ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನು ಈ ಬಾರಿಯ ಹೆಣ್ಣು ಶಿಶು ಉಳಿಸಿ ರಾಜ್ಯ ಪ್ರಶಸ್ತಿಗೆ ಐ.ಎಂ.ಐ ರಾಜ್ಯ ಘಟಕ ಆಯ್ಕೆ ಮಾಡಿದ್ದು, ನವೆಂಬರ್ ಮೊದಲ ವಾರದಲ್ಲಿ ತುಮಕೂರಿನಲ್ಲಿ ಜರುಗಲಿರುವ ರಾಜ್ಯ ವೈದ್ಯರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಐ.ಎಂ.ಎ ರಾಜ್ಯ ಘಟಕದ ಪ್ರಕಟಣೆ ತಿಳಿಸಿದೆ.
ಡಾ. ಎಂ. ಅಣ್ಣಯ್ಯ ಕುಲಾಲ್’ಗೆ ಐ.ಎಂ.ಎ ರಾಜ್ಯ ಪ್ರಶಸ್ತಿ
Kulal news
1 Min Read