ವಿಧಾನಸಭೆ ಹಾಗು ವಿಧಾನ ಪರಿಷತ್ ಸೀಟ್ ಕೊಡುವಂತೆ ರಾಜಕೀಯ ಪಕ್ಷಗಳಿಗೆ ಒಕ್ಕೊರಲ ಹಕ್ಕೊತ್ತಾಯ
ಬಂಟ್ವಾಳ (ನ. ೨೪): ಬಂಟ್ವಾಳ ತಾಲೂಕಿನ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭೆ ಮತ್ತು ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನಸಭೆ ಆಶ್ರಯದಲ್ಲಿ ನೂತನ ಕಾರ್ಯಕಾರಿ ಮಂಡಳಿ ಪದಗ್ರಹಣ ಹಾಗೂ ಕುಲಾಲ ಕುಂಬಾರರ ಯುವ ಸಮ್ಮಿಲನ 2016ವು ಅಕ್ಟೋಬರ್ 23ರಂದು ಮಧ್ಯಾಹ್ನ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸಂಸ್ಥಾಪಕರಾದ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ಕುಲಾಲರು ಜಾತ್ಯಾತೀತ ಸಮುದಾಯದವರು , ಎಲ್ಲಾ ಸಮುದಾಯದವರೊಂದಿಗೆ ಬೆರತುಕೊಂಡು ನಂಬಿದವರಿಗೆ ಯಾವತ್ತು ಮೋಸ ಮಾಡದ ಜನ . ಸಾಮಾಜಿಕ ಅಸಮಾನತೆಯನ್ನು ತೊಲಗಿಸುವ ಕೆಲಸವನ್ನು ಮಾಡಲು ನಾವೆಲ್ಲರೂ ಮುಂದೆ ಬರಬೇಕಾಗಿದೆ. ಆ ದಿಕ್ಕಿನಲ್ಲಿ ಕೆಲಸ ಮಾಡುವ ಕುಲಾಲರ ಯುವ ವೇದಿಕೆಗೆ ಸಹಕಾರವನ್ನು ನಾವು ನೀಡಬೇಕಾಗಿದೆ. ಜಿಲ್ಲೆಯಲ್ಲಿ ಪ್ರತಿ ಮನೆ ಮನೆ ಬೇಟಿ ನೀಡಿ ಪ್ರಥಮ ,ದ್ವಿತೀಯ ಮತ್ತು ತೃತೀಯ ಹಂತದ ನಾಯಕರನ್ನು ಸರ್ವೆ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಲಾಗುತ್ತದೆ , ಅ ಮೂಲಕ ಯುವ ವೇದಿಕೆ ಯುವಕರನ್ನು ಮುಂಚೂಣಿಗೆ ತಂದು ಕಿಂಗ್ ಮೇಕರ್ ಮಾಡುವ ಕೆಲಸ ಮಾಡಲಾಗುತ್ತಿದೆ. ರಾಜಕೀಯವಾಗಿ ಕುಲಾಲ ಸಮುದಾಯದವರಿಗೆ ಅನ್ಯಾಯವಾಗಿದೆ. ಎಲ್ಲಾ ಪಕ್ಷಗಳು ಚುನಾವಣೆ ಬಂದಾಗ ಒಲೈಕೆ ಕೆಲಸ ಮಾತ್ರ ಆಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬದಲಾವಣೆಯ ಗಾಳಿ ತರಬಲ್ಲ ಶಕ್ತಿ ಬಂಟ್ವಾಳ ಕುಲಾಲರಿಂದ ಆಗಬೇಕಾಗಿದೆ. ಬದಲಾವಣೆಯ ದಾರಿ ಬಂಟ್ವಾಳದಿಂದ ನಾಂದಿಯಾಗಲಿ ಎಂದರು. ಯುವ ಸಮುದಾಯ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಕೆಲಸವನ್ನು ಮೈಗೂಡಿಸಿಕೊಳ್ಳಿ ಅ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಅವಕಾಶ ಹೆಚ್ಚು ಎಂದರು.
ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷರಾದ ತೇಜಸ್ವಿರಾಜ್ ಮಾತನಾಡಿ, ರಾಜಕೀಯ ಶಕ್ತಿ ಇಲ್ಲದೆ ಯಾವುದೇ ಸಂಘಟನೆ ಬೆಳೆಯಲು ಸಾಧ್ಯವಿಲ್ಲ, ಕುಲಾಲ ಯುವ ಸಮುದಾಯ ರಾಜಕೀಯ ಮುಂದೆ ಬರುವ ಮೂಲಕ ಸಂಘಟನೆಯನ್ನು ಮಾಡಿ ಸಮುದಾಯಕ್ಕೆ ಕೊಡುಗೆ ನೀಡಿ ಎಂದರು.
ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳದ ನೂತನ ಅಧ್ಯಕ್ಷರಾದ ನಾರಾಯಣ. ಸಿ. ಪೆರ್ನೆ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ವಿಭಾಗೀಯ ಅಧ್ಯಕ್ಷರಾದ ಮೋಹಿತ್ ಕುಲಾಲ್ ಕದ್ರಿ ಕಂಬಳ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಜಯೇಶ್ಗೋವಿಂದ್, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಕರಾವಳಿ ವಿಭಾಗ ವಿಭಾಗೀಯ ಕಾರ್ಯಾಧ್ಯಕ್ಷರಾದ ಅಶೋಕ್ ಕುಲಾಲ್ ಕೂಳೂರು, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಕರ್ನಾಟಕ ರಾಜ್ಯ ಕುಂಬಾರರ ಮಹಿಳಾ ಸಂಘ (ರಿ.)ದ ರಾಜ್ಯ ಉಪಾಧ್ಯಕ್ಷೆ ಅಧ್ಯಕ್ಷೆ ಯಶೋಧ ಬಿ., ಬಂಟ್ವಾಳ ಉಪವಿಭಾಗ ಅಬಕಾರಿ ಉಪನಿರೀಕ್ಷಕರಾದ ಕು| ಸುಜಾತ, ಸಿವಿಲ್ ಇಂಜಿನಿಯರ್ ಪ್ರಕಾಶ್, ಮಹಾಬಲ ಕುಲಾಲ್ , ಅಶೋಕ್ ಕುಲಾಲ್ , ಹೇಮಚಂದ್ರ ಕೈರಂಗಳ , ಪ್ರಶಾಂತ್ ಶಕ್ತಿ ನಗರ, ಡಿ.ಎಂ ಕುಲಾಲ್, ಮಚ್ಚೆಂದ್ರ, ಸದಾಶಿವ ಬಂಗೇರ , ಸತೀಶ್ ಕುಲಾಲ್ , ಶೇಷಪ್ಪ ಮಾಸ್ಟರ್ , ಆನಂದ ಕುಲಾಲ್, ಲಕ್ಷ್ಮಣ್ ಅಗ್ರಬೈಲು, ಸತೀಶ್ ಜಕ್ರಿ ಬೆಟ್ಟು, ಮಹಾಬಲ ಕುಲಾಲ್, ಹರೀಶ್ ಕಾರಿಂಜ ,ಹೆಚ್. ಕೆ . ನಯನಾಡು,ಸತೀಶ್ ಪಲ್ಲಮಜಲು, ಆನಂದ ಬಂಜನ್, ನಾರಾಯಣ ಬಂಗೇರ ಹಾಗೂ ನಿಯೋಜಿತ ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಾಧಕರಿಗೆ ಸನ್ಮಾನ, ಸ್ವಜಾತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಕ್ವಿಝ್ ಹಾಗೂ ಬ್ರಹ್ಮರ ಕೂಟ್ಲು ಶ್ರೀಮತಿ ಭಾರತಿ ಹಾಗು ಅವರ ಶಿಷ್ಯ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.