ಬೆಹರೈನ್ : “ಕಡಲ ನಡುವಿನ ಪ್ರವಾಸಿಗಳಿಗೆ, ಕಡಲ ತಡಿಯ ಅನುಭವ” ಎಂಬ ಧ್ಯೇಯವಾಕ್ಯದಲ್ಲಿ ಬಹರೈನ್ “ಕರಾವಳಿ ಉತ್ಸವ 2016″ ಕಾರ್ಯಕ್ರಮವನ್ನು ಕಡಲ ನಾಡು ಬಹರೈನ್ ನಲ್ಲಿ ಆಯೋಜಿಸಿದ್ದು, ವೇದಿಕೆಯಲ್ಲಿ ತುಳು ಸಂಸ್ಕೃತಿಯನ್ನು ಬಿಂಬಿಸುವ ಹಲವು ಕಾರ್ಯಕ್ರಮ ನೀಡುವ ಮೂಲಕ ಕುಲಾಲರ ಟೀಮ್ ಎಲ್ಲರ ಗಮನಸೆಳೆದು ಜನಮನ ರಂಜಿಸಿತು.
ಅಕ್ಟೋಬರ್ 14ರಂದು ಉತ್ಸವವು ಕನ್ನಡ ಸಂಘ, ಬಂಟ್ಸ್ ಸಂಘ ದ ಸಹಯೋಗದೊಂದಿಗೆ ಮನಾಮಾದ ಅಲ್-ರಜಾ ಸ್ಕೂಲ್ ಆಡಿಟೋರಿಯಂನಲ್ಲಿ ನಡೆದಿದ್ದು, ಇಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂಟು ತಂಡಗಳ ಭಾಗವಹಿಸಿತ್ತು.
ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಾರ್ತಾಜೆ, ಉಪಾಧ್ಯಕ್ಷ ನಿರಂಜನ್ ಅವರ ಮಾರ್ಗದರ್ಶನದಲ್ಲಿ ಸೀಮಾ ಗುರುಪ್ರಸಾದ್ ಅವರ ನಿರ್ದೇಶನದಲ್ಲಿ, ಗಣೇಶ್ ಕುಲಾಲ್ ಮಾಣಿಲ ನಿರೂಪಣೆಯಲ್ಲಿ ಕುಲಾಲರ ಟೀಮ್ ನ ತುಳು ಸಂಸ್ಕೃತಿಯನ್ನು ಬಿಂಬಿಸುವ ಆಟಿ ಕಳೆಂಜ, ಹುಲಿ ವೇಷ, ಭೂತದ ಕೋಲ, ಮಡಿಕೆ ತಯಾರಿಸುವ ಪ್ರಾತ್ಯಕ್ಷಿಕೆಗಳು ಎಲ್ಲರ ಗಮನಸೆಳೆದು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.