ಬಂಟ್ವಾಳ (ಅ.೦೨): ಮನೆ ಛಾವಣಿ ಕುಸಿತದಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಬಂಟ್ವಾಳ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.
ಮಂಜೇಶ್ವರ ಗ್ರಾ. ಪಂ ವ್ಯಾಪ್ತಿಯ ಕುಂಜತ್ತೂರು ಸಮೀಪದ ಮಜಲು ಗುಡ್ಡೆ ಎಂಬಲ್ಲಿ ವಾಸವಿರುವ ಮಂಜಪ್ಪ ಸಾಲ್ಯಾನ್ ಅವರ 21 ವರ್ಷಗಳ ಹಳೆಯದಾದ ಮನೆ ಛಾವಣಿಯು ತಿಂಗಳ ಹಿಂದೆ ಸುರಿದ ಮಳೆಗೆ ಮಧ್ಯ ಭಾಗದಿಂದ ಕುಸಿದು ಬಿದ್ದಿತ್ತು. ಸಾಲ್ಯಾನ್ ಬಡ ಕುಟುಂಬದವರಾಗಿದ್ದು, ಮನೆ ರಿಪೇರಿಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇವರ ಸ್ಥಿತಿಯನ್ನು ಮನಗಂಡ ವೇದಿಕೆ ಸದಸ್ಯರು ಕೈಲಾದ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ನೆರವು ವಿತರಿಸುವ ವೇಳೆ ಬಂಟ್ವಾಳ ಯುವ ವೇದಿಕೆಯ ಅಧ್ಯಕ್ಷರಾದ ನಾರಾಯಣ ಪೆರ್ಣೆ, ಕಾರ್ಯದರ್ಶಿ ಸತೀಶ್ ಸಂಪಾಜೆ, ಯುವ ವೇದಿಕೆಯ ರಾಜ್ಯ ವಿಭಾಗೀಯ ಕಾರ್ಯಾಧ್ಯಕ್ಷರಾದ ಆಶೋಕ ಕೂಳೂರು, ಲಕ್ಷಣ್ ಕುಲಾಲ್, ದೇವಪ್ಪ ಕುಲಾಲ್, ಸುಕುಮಾರ್ ಕುಲಾಲ್, ಸತೀಶ್ ಪಲ್ಲಮಜಲು, ಬಾಲಕೃಷ್ಣ, ಅನಂದ ಪೆರೊಡಿ, ಉಮೇಶ್ ಬಿ.ಸಿ.ರೋಡ್, ಮಂಜೇಶ್ವರ ವಲಯ ಯುವ ವೇದಿಕೆಯ ಕಾರ್ಯದರ್ಶಿ ಶರತ್ ಅನ್ನಮಜಲು, ಯುವ ವೇದಿಕೆಯ ಕಾಸರಗೋಡು ಜಿಲ್ಲಾ ಉಸ್ತುವಾರಿ ನವೀನ್ ಕುಮಾರ್ ಮಜಲ್ ಹಾಗೂ ಮಂಜೇಶ್ವರ ವಲಯ ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನೆ ಛಾವಣಿ ಕುಸಿತದಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ಬಂಟ್ವಾಳ ಕುಲಾಲ ಯುವ ವೇದಿಕೆ ನೆರವು
Kulal news
1 Min Read