ಕಾಪು : ವಿಕಲಾಂಗ ಕಾಪು ಸಮೀಪದ ದಯಾನಂದ ಮೂಲ್ಯರ ಕುಟುಂಬ ಎದುರಿಸುತ್ತಿದ್ದ ನೀರಿನ ಬವಣೆಗೆ `ಕುಲಾಲ ಚಾವಡಿ’ ವಾಟ್ಸಪ್ ಗ್ರೂಪಿನ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಶಾಶ್ವತ ಪರಿಹಾರ ಒದಗಿಸಿದ್ದಾರೆ. ತಮ್ಮ ಗುಂಪಿನ ಸದಸ್ಯರು ಒಂದಾಗಿ ಸಂಗ್ರಹಿಸಿದ ಹಣದಿಂದ ನೀರಿನ ಸಮಸ್ಯೆಗೆ ಬೋರ್ವೇಲ್ ಕೊರೆಸಿ ಅದಕ್ಕೆ ಪಂಪು ಜೋಡಿಸಿ ಕೊಡುವುದರ ಮೂಲಕ ಬಡವನ ಮನೆಯ ಕಣ್ಣೀರೊರೆಸುವ ಯತ್ನ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸೆ.೨೫, ಆದಿತ್ಯವಾರದಂದು ದಯಾನಂದ ಮೂಲ್ಯರ ಮನೆಗೆ ತೆರಳಿದ `ಕುಲಾಲ ಚಾವಡಿ’ ಗ್ರೂಪಿನ ಮುಖ್ಯಸ್ಥರು ಕುಲಾಲ ಮುಖಂಡರ ಸಮ್ಮುಖದಲ್ಲಿ ಬೋರ್ವೆಲ್ ಉದ್ಘಾಟಿಸಿದರು.
ಈ ಸಂದರ್ಭ ಗ್ರೂಪಿನ ಎಡ್ಮಿನ್ ಸಂತೋಷ್ ಕುಲಾಲ್ ಪದವು ಕಾರ್ಕಳ, ಕಾಪು ಯುವವೇದಿಕೆಯ ಅಧ್ಯಕ್ಷ ಉದಯ ಕುಲಾಲ್, ಸುಧೀರ್ ಬಂಗೇರ ಕೆರ್ವಾಸೆ, ವಿದ್ಯಾರಾಜ್ ಪರಂಗಿಪೇಟೆ ಮಂಗಳೂರು, ಕಾಪು ಕುಲಾಲ ಸಂಫದ ಅಧ್ಯಕ್ಷ ರಾಜೇಶ್ ಕುಲಾಲ್, ಅರುಣ್ ಕುಲಾಲ್ ಮೂಳೂರು, ಸುನಿಲ್ ಎಸ್ ಮೂಲ್ಯ , ರವೀಂದ್ರ ಕುಲಾಲ್ ಪಣಿಯೂರು, ಕೃಷ್ಣ ಕುಲಾಲ್, ರಮೇಶ್ ಕುಲಾಲ್, ಯೋಗಿಶ್ ಕುಲಾಲ್ ಮೂಳೂರು ಮುಂತಾದವರು ಉಪಸ್ಥಿತರಿದ್ದರು.
‘ನಾನು ಉಪವಾಸವಿದ್ದರೂ ತೊಂದರೆಯಿಲ್ಲ, ಪತಿ-ಮಗು ಹಸಿದಿರಬಾರದು. ಆದರೆ ಕೆಲವೊಂದು ಸಲ ಕೈತುತ್ತಿಗೂ ತೊಂದರೆಯಾಗುತ್ತಿದೆ. ಕುಟುಂಬವನ್ನು ಹೇಗಾದರೂ ಸಲಹಬಲ್ಲೆ. ಆದರೆ ಕುಡಿಯುವ ನೀರಿಗೊಂದು ಪುಣ್ಯವಂತರು ವ್ಯವಸ್ಥೆ ಮಾಡಿಕೊಟ್ಟರೆ ಋಣಿಯಾಗಿರುತ್ತೇನೆ’ ದಯಾನಂದ ಅವರ ಪತ್ನಿ ಗಿರಿಜಾ ಅವರು ಹೇಳಿಕೊಂಡಿದ್ದರು. ಇವರ ನೋವಿಗೆ ಸ್ಪಂದಿಸುವ ಮೂಲಕ `ಕುಲಾಲ ಚಾವಡಿ’ ಸದಸ್ಯರು ಮಾನವೀಯತೆ ಮರೆದಿದ್ದಾರೆ.
ಬಡ ಸಂಸಾರ
ದಯಾನಂದ ಮೂಲ್ಯ ಉಡುಪಿ ಕಾಪುವಿನ ನಿವಾಸಿ. ಇವರಿಗೆ ಪತ್ನಿ ಹಾಗೂ ಪುಟ್ಟ ಮಗುವಿದೆ. ಹತ್ತು ವರ್ಷಗಳ ಹಿಂದೆ ಮಾರಕ ಕಾಯಿಲೆಯೊಂದಕ್ಕೆ ತುತ್ತಾಗಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ತನ್ನ ಎಡಗಾಲನ್ನೇ ಕಳೆದುಕೊಂಡಿದ್ದಾರೆ. ಅಲ್ಲಿಗೆ ಮನೆಯ ಆರ್ಥಿಕ ಆಧಾರ ಕುಸಿದು ಬಿದ್ದಂತಾಗಿದೆ. ಇದೀಗ ಬಡಕುಟುಂಬ ಜೀವನ ನಿರ್ವಹಣೆಗೆ ಪರದಾಡುತ್ತಿದೆ. ಈ ಬಡ ಸಂಸಾರ ಸಹೃದಯ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ. ಹಣದ ಸಹಾಯ ಮಾಡುವವರು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.
Dayanand Mulya
Syndicate Bank,
Branch : Kaup Main Road
SB A/c no. 01252210039546
IFSC Code: SYNB0000125