ಕಾರ್ಕಳ (ಸೆ. ೧೮): ಕುಲಾಲ ಸಂಘ ಇರ್ವತ್ತೂರು ಇದರ 4ನೇ ವರ್ಷದ ಮಹಾಸಭೆಯು ಇರ್ವತ್ತೂರಿನ ಶಾಲಾ ವೇದಿಕೆಯಲ್ಲಿ ಇಂದು ವಿಜೃಂಬಣೆಯಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ಕುಲಾಲ ಸಂಘ ಕಾರ್ಕಳ ಇದರ ಅದ್ಯಕ್ಷ ಭೋಜ ಕುಲಾಲ್ , ಗೌರವ ಅದ್ಯಕ್ಷ ಹೆಚ್. ಡಿ. ಕುಲಾಲ್, ಕೋಶಾಧಿಕಾರಿ ಕೃಷ್ಣ ಕುಲಾಲ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಜಯ ಕುಲಾಲ್ , ಗೌರವಾಧ್ಯಕ್ಷ ಐತು ಮೂಲ್ಯ, ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಲಾಲ್ , ಕೋಶಾಧಿಕಾರಿ ಮೋಹನ್ ಮೂಲ್ಯ ಹಾಗೂ ಮಹಿಳಾ ಮಂಡಳಿ ಅಧ್ಯಕ್ಷರಾದ ಪ್ರಮೀಳಾ ಹಾಜರಿದ್ದರು.
ತಾಲೂಕು ಪಂಚಾಯತಿಗೆ ಆಯ್ಕೆಯಾದ ಪ್ರಮೀಳಾ ಮೂಲ್ಯ ಹಾಗೂ ಪೋಸ್ಟ್ ಮಾಸ್ಟರ್ ಆಗಿ ಬಡ್ತಿ ಹೊಂದ ಇರ್ವತ್ತೂರಿನಿಂದ ಕೆರ್ವಾಸೆಗೆ ವರ್ಗಾವಣೆಗೊಂಡಿರುವ ಮೋಹನ್ ಕುಲಾಲ್ ಇವರಿಗೆ ಶಾಲು ಹೊದಿಸಿ, ಫಲ-ಪುಷ್ಪ ಹಾಗೂ ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಜಯ ಕುಲಾಲ್, ಸುರೇಶ್ ಬಂಗೇರ ಪಾಲಾಜೆ , ಸತೀಶ್ ಬಂಗೇರ ಪಾಲಾಜೆ, ನಾಗೇಶ್ ಕುಲಾಲ್ ಪೊಸಲಾಯಿ, ರೂಪ .ಎಸ್. ಬಂಗೇರ, ಚಂದ್ರಶೇಖರ್ ಇವರು ಅತಿಥಿಗಳಿಗೆ ಸನ್ಮಾನಿಸಿದರು. ನಾಗೇಶ್ ಕುಲಾಲ್ ಸ್ವಾಗತ ಭಾಷಣ ಮಾಡಿದರು. ಅಧ್ಯಕ್ಷ ಜಯ ಕುಲಾಲ್ ಸಂಘದ ಬಗ್ಗೆ ಪ್ರಸ್ತಾಪಿಸಿದರು.
ಅತಿಥಿಗಳಿಂದ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ನಗದು ಬಹುಮಾನ ನೀಡಿ, ಸಮಾಜದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ಅತಿಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತಾಲೂಕು ಪಂಚಾಯತಿಗೆ ಆಯ್ಕೆಯಾದ ಪ್ರಮೀಳಾ ಮೂಲ್ಯ ಹಾಗೂ ಪೋಸ್ಟ್ ಮಾಸ್ಟರ್ ಆಗಿ ಬಡ್ತಿ ಹೊಂದ ಇರ್ವತ್ತೂರಿನಿಂದ ಕೆರ್ವಾಸೆಗೆ ವರ್ಗಾವಣೆಗೊಂಡಿರುವ ಮೋಹನ್ ಕುಲಾಲ್ ಇವರಿಗೆ ಶಾಲು ಹೊದಿಸಿ, ಫಲ-ಪುಷ್ಪ ಹಾಗೂ ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು.
ಆಟೋಟ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೋಶಾಧಿಕಾರಿ ಮೋಹನ್ ಮೂಲ್ಯ ವರ್ಷದ ವರದಿ ಮಂಡಿಸಿದರು. ಜಯ ಕುಲಾಲ್, ಸುರೇಶ್ ಬಂಗೇರ ಪಾಲಾಜೆ , ಸತೀಶ್ ಬಂಗೇರ ಪಾಲಾಜೆ, ನಾಗೇಶ್ ಕುಲಾಲ್ ಪೊಸಲಾಯಿ, ರೂಪ .ಎಸ್. ಬಂಗೇರ, ಚಂದ್ರಶೇಖರ್ ಇವರು ಅತಿಥಿಗಳಿಗೆ ಸನ್ಮಾನಿಸಿದರು. ನಾಗೇಶ್ ಕುಲಾಲ್ ಸ್ವಾಗತ ಭಾಷಣ ಮಾಡಿದರು. ಅಧ್ಯಕ್ಷ ಜಯ ಕುಲಾಲ್ ಸಂಘದ ಬಗ್ಗೆ ಪ್ರಸ್ತಾಪಿಸಿದರು. ಶ್ವೇತ ಕುಲಾಲ್ ಹಾಗೂ ಶ್ರದ್ಧಾ ಕುಲಾಲ್ ಪ್ರಾರ್ಥನೆಗೈದರೆ, ಇರ್ವತ್ತೂರು ಗ್ರಾಮ ಪಂಚಾಯತ್ ಸದಸ್ಯೆ ರೇವತಿ ಮೂಲ್ಯ ವಂದಿಸಿದರು. ಬೆಳಿಗ್ಗೆ ಮಕ್ಕಳಿಗೆ ಆಟೋಟ ಸ್ಫರ್ಧೆ ಏರ್ಪಡಿಸಲಾಗಿತ್ತು . ಭೋಜನದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇರ್ವತ್ತೂರು ಕುಲಾಲ ಸಂಘದ ವಾರ್ಷಿಕ ಸಭೆ- ಸನ್ಮಾನ-ವಿದ್ಯಾರ್ಥಿವೇತನ ವಿತರಣೆ
Kulal news
2 Mins Read