ಮಂಗಳೂರು(ಸೆ.೧೪): ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಉರ್ವಬೈಲು ರಸ್ತೆಗೆ ಸಾಧಕ, ಜನಾನುರಾಗಿ ಕೃಷಿಕ ದಿವಂಗತ ಬೂದ ಮೂಲ್ಯ ಅವರ ನಾಮಕರಣ ಸಮಾರಂಭ ಸೆಪ್ಟೆಂಬರ್ ೨೫ರಂದು ಸಂಜೆ ನಡೆಯಲಿದೆ.
ಸಮಾರಂಭದಲ್ಲಿ ಸಚಿವ ರಮಾನಾಥ ರೈ, ಶಾಸಕ ಜೆ. ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಮೇಯರ್ ಹರಿನಾಥ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಮೇ ೬, ೧೯೩೪ರಲ್ಲಿ ಜನಿಸಿದ್ದ ಬೂದ ಮೂಲ್ಯ ಅವರು ಒಬ್ಬ ಪ್ರಗತಿಪರ ಕೃಷಿಕರಾಗಿದ್ದು, ಕಠಿಣ ದುಡಿಮೆಯಿಂದ ಉರ್ವ ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ತೋಟ, ಕೃಷಿ ಗದ್ದೆಗಳನ್ನು ಹೊಂದಿದ್ದು, ಸ್ವತಃ ದುಡಿದು ಇತರರಿಗೆ ಪ್ರೇರಕ ಶಕ್ತಿಯಾಗಿದ್ದರು. ಯಾವುದೇ ಜಾಗವನ್ನೂ ಖಾಲಿ ಬಿಡದೆ ಎಲ್ಲ ರೀತಿಯ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದರು. ಕೃಷಿಯಲ್ಲಿಯೂ ಮನಸ್ಸು ಮಾಡಿದರೆ ಇತರ ಯಾವುದೇ ಉದ್ಯೋಗಗಳಿಗಿಂತ ಹೆಚ್ಚಿನ ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು.
ಶತಮಾನಗಳಿಂದಲೂ ಕೃಷಿಯ ಜತೆಗೆ ಉಪಕಸುಬಾಗಿ ನಡೆದುಕೊಂಡು ಬಂದಿರುವ ಹೈನುಗಾರಿಕೆಯನ್ನು ಕೂಡ ಅತ್ಯಂತ ವ್ಯವಸ್ಥಿತವಾಗಿ ಮಾಡಿ, ಪ್ಯಾಕೆಟ್ ಹಾಲು ಇಲ್ಲದ ದಿನಗಳಲ್ಲಿ ಹೋಟೆಲ್ ಗಳಿಗೆ ಪೂರೈಕೆ ಮಾಡುತ್ತಿದ್ದವರಲ್ಲಿ ಬೂದ ಮೂಲ್ಯ ಮೊದಲಿಗರಾಗಿದ್ದರು. ಯಾವುದೇ ಸಮಸ್ಯೆ ಎದುರಾದರೂ ಆತಂಕಗೊಳ್ಳದೆ ದಿಟ್ಟತನದಿಂದ ಎದುರಿಸುತ್ತಿದ್ದ ಅವರು ಪರೋಪಕಾರಿಯೂ ಕೊಡುಗೈ ದಾನಿಯೂ ಆಗಿದ್ದರು.
ಮೇ ೩೧, ೨೦೦೭ರಂದು ನಿಧನರಾದ ಸಾಧಕ ಬೂದ ಮೂಲ್ಯ ಅವರ ಹೆಸರು ಸದಾ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಸಲುವಾಗಿ ಮನಪಾ ಉರ್ವಬೈಲಿನ ದೈವಜ್ಞ ಕಲ್ಯಾಣ ಮಂಟಪದ ಪಕ್ಕದ ರಸ್ತೆಗೆ ಅವರ ಹೆಸರನ್ನಿಡಲು ಉದ್ದೇಶಿಸಿದೆ.
ಬೂದ ಮೂಲ್ಯ ಅವರು ತಮ್ಮ ಧರ್ಮಪತ್ನಿ ಜೊತೆಗೆ