ಮಂಗಳೂರು (ಸೆ. ೧೨): ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಇವರ ಆಶ್ರಯದಲ್ಲಿ ಕುಂಭ ವೈದ್ಯರ ವಾರ್ಷಿಕ ಸ್ನೇಹ ಕೂಟ ಹಾಗೂ ತರಬೇತಿ ಶಿಬಿರ ಡಿಸಂಬರ್ 24ರಂದು ಮಂಗಳೂರಿನ ಐಎಂಎ ಹಾಲ್ ನಲ್ಲಿ ಜರುಗಲಿದೆ.
ಮೂಲತಃ ಕರ್ನಾಟಕದವರಾಗಿರುವ ದೇಶ-ವಿದೇಶ ಗಳಲ್ಲಿ ವೃತ್ತಿ ನಡೆಸುತ್ತಿರುವ ಕುಂಬಾರ ಸಮುದಾಯದ ವೈದ್ಯರ ಸಂಘಟನೆಯಾದ ಕುಂಭ ವೈದ್ಯರ ಕೂಟವನ್ನು ನೂತನವಾಗಿ ರಚಿಸಲಾಗಿದ್ದು, ಇದು ಸಾವಿರಾರು ಸದಸ್ಯರನ್ನು ಹೊಂದಿದೆ. ಇಡೀ ದಿನದ ಕಾರ್ಯಕ್ರಮದಲ್ಲಿ ಕರಾವಳಿ ಕುಲಾಲ್ ಕುಂಬಾರ ಯುವವೇದಿಕೆಯ ಪ್ರತೀ ವಿಧಾನ ಸಭಾ ಮಟ್ಟದ ಕನಿಷ್ಠ 5 ಗರಿಷ್ಠ 10 ಯುವಕರಂತೆ ಸುಮಾರು 25 ವಿಧಾನಸಭಾ ವ್ಯಾಪ್ತಿಯ ಕನಿಷ್ಠ 125 ರಿಂದ ಗರಿಷ್ಠ 250 ಮಂದಿಗೆ ಪರಿಣಾಮಕಾರಿ ನಾಯಕತ್ವದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಶಿಬಿರವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಬೆಳಿಗ್ಗೆ 9. 30 ಘಂಟೆಗೆ ಆರಂಭವಾಗುವ ಶಿಬಿರ ಮಧ್ಯಾಹ್ನ 1.30ಕ್ಕೆ ಭೋಜನ ಕೂಟದೊಂದಿಗೆ ಮುಕ್ತಾಯವಾಗುವುದು. ನಂತರ 2.30ರಿಂದ ಕುಂಭ ವೈದ್ಯರ ಕೂಟ ಕರ್ನಾಟಕ ಇದರ ವಾರ್ಷಿಕ ಸ್ನೇಹ ಕೂಟ ಜರುಗಲಿರುವುದು.
ಈ ಕಾರ್ಯಕ್ರಮವನ್ನು ಪ್ರಾಯೋಜಕರಾದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಜೊತೆ ಕರಾವಳಿ ಕುಲಾಲ-ಕುಂಬಾರ ಯುವವೇದಿಕೆಯ ಕೇಂದ್ರ ಸಮಿತಿ ಹಾಗು ಎಲ್ಲಾ ಘಟಕಗಳು, ಕರಾವಳಿ ಕುಲಾಲ-ಕುಂಬಾರ ಒಕ್ಕೂಟ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ, ವಿಶ್ವ ಕುಂಬಾರರ ವೇದಿಕೆ , ದ. ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘಗಳ ಸಹಕಾರವನ್ನು ನಿರೀಕ್ಷಿಸಲಾಗುವುದು ಎಂದು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸ್ಥಾಪಕರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.