ಮಂಗಳೂರು (ಸೆ.೧೧): ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ ಕಟೀಲು ದುರ್ಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿದ್ದನ್ನು ಖಂಡಿಸಿ ಪೊಳಲಿ ರಾಜರಾಜೇಶ್ವರಿ ದೇವಾಲಯದಿಂದ ಕಟೀಲು ದುರ್ಗಾಪರಮೇಶ್ವರಿ ದೇವಾಲಯದವರೆಗೆ ನಡೆ ಜಾಥಾ ಇಂದು ಬೆಳಿಗ್ಗೆ 6.45 ಕ್ಕೆ ಪೊಳಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಜೊತೆಗೆ ಆರಂಭವಾಯಿತು. ಸಂಸದ ನಳೀನ್ ಕುಮಾರ್ ಕಟೀಲ್ , ರಾಜೇಶ್ ನಾಯಕ್ ಉಳೆಪಾಡಿಗುತ್ತು, ಕಲ್ಲಡ್ಕ ಡಾ ಪ್ರಭಾಕರ ಭಟ್, ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಸತ್ಯಜಿತ್ ಸುರತ್ಕಲ್, ಜಿತೇಂದ್ರ ಕೊಠಾರಿ ಜೊತೆ ಸಾವಿರಾರು ಮಿಕ್ಕಿ ಭಕ್ತರು ಕಾಲ್ನಡಿಗೆಯಲ್ಲಿ ಕಟೀಲಿನತ್ತ ಹೊರಟರು.
ಕಟೀಲಿನ ತಾಯಿ ಜಗತ್ತಿನ ತಾಯಿ ಕಾಮಧೇನು ಪ್ರತಿರೂಪ. ಸಾಧು ಸಂತರೂ ಕೇವಲ ಮಠ ಮಂದಿರ ಕಟ್ಟಲೂ ಮಾತ್ರವಲ್ಲ ಸಮಾಜದ ರಕ್ಷಣಾ ಸೇವೆ ಮಾಡಬೇಕು. ಯಾರನ್ನು ವಿರೋಧ ಪ್ರತಿರೋಧ ಮಾಡುವ ಉದ್ದೇಶ ನಮ್ಮದಲ್ಲ, ಆದರೆ ಇಂತಹ ಘಟನೆ ಆಗದಿರುವ ಜಾಗೃತಿ ಚಿಂತನೆ ಬಹಳ ಅಗತ್ಯ. ಇದಕ್ಕಾಗಿ ಇಡೀ ಸಂಘಟನೆಗಳ ಒಗ್ಗಟ್ಟಿನಲ್ಲಿ ನಮ್ಮ ಮನಸ್ಸು ಭಾವನೆಗಳು ಒಂದಾಗಬೇಕು. ಈ ದೇಶ ಬಹುಮತೀಯರ ನಾಡಾಗಿದ್ದು ಧರ್ಮೀಯ ಕಳಂಕತೆ, ಇಂತಹ ಘಟನೆಗೆ ಕಾರಣ. ಆದುದರಿಂದ ಪ್ರತಿಯೊಬ್ಬರು ಯೋಚನೆ ಮಾಡುವ ಪರಿಸ್ಥಿತಿ ಇದಾಗಿದೆ. ಇಂದು ವಿದ್ಯಾವಂತರೇ ಹಾಳಾಗುತ್ತಿದ್ದು ನಮ್ಮ ದುರದೃಷ್ಟ. ಇಂತಹ ಅಹಿತಕರ ಘಟನೆಯಿಂದ ತಾಯಿಗೆ ಅವಮಾನವಾದಾಗ ಆಕೆಯ ಮಕ್ಕಳಿಗೆ ಆಗುವ ನೋವು ಅಷ್ಟಿಷ್ಟಲ್ಲ. ಧರ್ಮ ಕ್ಷೇತ್ರಗಳಲ್ಲಿ ಪೂಜೆ ಮಾಡುವಾಗ ಮುಕ್ತ ಮನಸ್ಸಿನಿಂದ ಪೂಜಿಸಬೇಕು. ಪ್ರತಿಯೊಂದು ಸಮಾಜ ಧಾರ್ಮಿಕ ಧಿಶಕ್ತಿಯಾಗಿದೆ. ಹಿಂದೂ ದೇಶದಲ್ಲಿ ನಮ್ಮದೇ ಆಚಾರ ವಿಚಾರಗಳ ಭದ್ರತೆ ಉಳಿಸಲು ನಾವೂ ಪ್ರಯತ್ನಿಸೋಣ ಎಂದು ಮೋಹನದಾಸ್ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟರು.