ಸೌದಿ ಅರೇಬಿಯಾ : ನಾವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ದೈವ ಕೃಪೆ ಇರುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಕೊಲ್ಯದ ಮುಖೇಶ್ ಕುಲಾಲ್ ಅವರು `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪಿನ ಸಕ್ರಿಯ ಸದಸ್ಯರು. ನಮ್ಮ ಯಾವುದೇ ಸಹಾಯಹಸ್ತದ ಕಾರ್ಯಕ್ಕೂ ಪ್ರತೀ ಬಾರಿಯೂ ತಮ್ಮ ಬೆಂಬಲ ಸೂಚಿಸುತ್ತ ಧನ ಸಹಾಯ ನೀಡುತ್ತಾ ಬಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ತನಿಯಪ್ಪ ಮೂಲ್ಯರಿಗೂ ಮೊನ್ನೆಯಷ್ಟೇ ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದರು.
ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಮುಖೇಶ್ ರಜೆಯ ಪ್ರಯುಕ್ತ ಕ್ರಿಕೆಟ್ ಆಟವಾಡಲು ತೆರಳಿದ್ದುಮನೆಗೆ ವಾಪಸಾಗುವ ದಾರಿಯಲ್ಲಿ ತಮ್ಮ ಪರ್ಸನ್ನು ಕಳೆದುಕೊಂಡಿದ್ದರು. ಇದರಲ್ಲಿ ಹಣದ ಜೊತೆಗೆ ವಿದೇಶದಲ್ಲಿ ಬಹುಮುಖ್ಯವಾಗಿ ಇರಬೇಕಾದಂತಹ ಅವರ ಐಡಿ ಕಾರ್ಡ್ (ಇಕಾಮಾ), ಮೆಡಿಕಲ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಎಲ್ಲವೂ ಇತ್ತು. ಇದೆಲ್ಲವನ್ನೂ ಕಳೆದುಕೊಂಡ ಆಘಾತದಲ್ಲಿದ್ದ ಮುಕೇಶರಿಗೆ ಸಂಜೆ ಹೊತ್ತಿಗೆ ಶುಭ ಸುದ್ದಿ ಬಂದಿತ್ತು. ಪರ್ಸ್ ದಾರಿಯಲ್ಲಿ ಬಿದ್ದಿದ್ದನ್ನು ಕಂಡ ವ್ಯಕ್ತಿಯೊಬ್ಬರು ಅದನ್ನು ಜೋಪಾನವಾಗಿಟ್ಟು, ತಮ್ಮ ಸ್ನೇಹಿತನ ಜೊತೆ ಸೇರಿ ಕಂಪೆನಿ ಮೆಡಿಕಲ್ ಕಾರ್ಡ್ ನಲ್ಲಿದ್ದ ಅಡ್ರೆಸ್ ನ ಫೋನ್ ನಂಬರ್ ಪತ್ತೆ ಹಚ್ಚಿದ್ದಾರೆ. ಆ ಮೂಲಕ ಮುಖೇಶ್ ಅವರನ್ನು ಕಂಡು ಹಿಡಿದ ಅವರು ಪರ್ಸನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅಂದ ಹಾಗೆ ಈ ಪರ್ಸ್ ಸಿಕ್ಕಿದ್ದು ಒಬ್ಬ ಪಾಕಿಸ್ತಾನಿಗೆ!
ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಮಹಾನುಭಾವ !
Kulal news
1 Min Read