ಮಂಗಳೂರು : ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಹಾಗೂ ದೇವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ ಜಬ್ಬಾರ್ ಬಿ.ಸಿ.ರೋಡ್ ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಕುಂಬಾರ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.
ಹಿಂದೂ ಬಾಂಧವರು ಅದರಲ್ಲೂ ಕರಾವಳಿಯ ಉದ್ದಗಲದ ಭಕ್ತರು ಅತೀ ಶೃದ್ಧೆಯಿಂದ ಪೂಜಿಸುವ, ನಂಬಿಕೆಯನ್ನು ಇಟ್ಟುಕೊಂಡಿರುವ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ತಾಣಗಳಲ್ಲಿ ಬರೆದು ಚಿತ್ರಿಸಿ ಪುರಾತನ ಸಂಸ್ಕೃತಿಯ ಧಾರ್ಮಿಕ ತೇಜೋವಧೆ ಯನ್ನ ಮಾಡಲು ಹವಣಿಸಿದ್ದನ್ನು ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ, ಕರಾವಳಿ ಕುಂಬಾರರ ಒಕ್ಕೊಟ ಹಾಗು ಕರಾವಳಿ ಕುಲಾಲ /ಕುಂಬಾರ ಯುವವೇದಿಕೆ ಖಂಡಿಸುತ್ತದೆ. ತಪ್ಪಿತಸ್ತರನ್ನು ಶೀಘ್ರವಾಗಿ ಬಂಧಿಸಿ ಶಿಕ್ಷಿಸಬೇಕು. ಇನ್ನು ಮುಂದೆ ಹಿಂದೂ ಸಂಸ್ಕಾರ, ಸಂಸ್ಕೃತಿ ಹಾಗು ಮೂಲ ನಂಬಿಕೆ ಗಳನ್ನ ಛೇಡಿಸುವ, ಮೂದಲಿಸುವ ಪ್ರವೃತ್ತಿಗೆ ಪೂರ್ಣ ವಿರಾಮ ಹಾಕಿಸಬೇಕು ಎಂದು ಕುಲಾಲ/ಕುಂಬಾರ ಸಂಘಟನೆಗಳ ಪರವಾಗಿ ಸಮುದಾಯದ ನಾಯಕರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟೀಲು ದೇವಿಯ ಬಗ್ಗೆ ಅವಹೇಳನ : ಕುಂಬಾರ ಸಂಘಟನೆಗಳ ಖಂಡನೆ
Kulal news
1 Min Read