ಗದಗ: ಕುಂಬಾರ ಸಮುದಾಯವನ್ನು ಸಂಘಟನಾತ್ಮಕವಾಗಿ ಮುಂದೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಬೇಕು ಎಂದು ನಗರಸಭೆ ಅಧ್ಯಕ್ಷೆ ಶಿವಲೀಲಾ ಅಕ್ಕಿ ಹೇಳಿದರು.
ನಗರದ ಲಯನ್ಸ್ ಕ್ಲಬ್ ಸಭಾ ಭವನದಲ್ಲಿ ಕುಂಬಾರ ಸಮಾಜ ಕ್ಷೇಮಾ ಭಿವೃದ್ಧಿ ಸಂಘದಿಂದ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಶಿಕ್ಷಣ ನೀಡಲು ಪ್ರಥಮ ಆದ್ಯತೆ ನೀಡಬೇಕು. ಸಮಾಜ ಅಭಿವೃದ್ಧಿಗೆ ಇದು ಅತಿ ಮುಖ್ಯ ಎಂದರು.
ವಿ.ಆರ್. ಕುಂಬಾರ ಮಾತನಾಡಿ, ಕುಂಬಾರ ಸಮಾಜವನ್ನು ಸಂಘಟಿಸಲು ಸರ್ಕಾರದ ನೆರವು ಪಡೆಯಬೇಕಾಗಿದೆ ಎಂದರು. ನಗರಸಭೆ ಉಪಾಧ್ಯಕ್ಷ ಕೃಷ್ಣ ಪರಾಪೂರ, ನಿಂಗಪ್ಪ ಕುಂಬಾರ, ಕೆ. ಬಸವರಾಜ, ನಗರಸಭಾ ಸದಸ್ಯರಾದ ಸದಾನಂದ ಪಿಳ್ಳೆ, ಕಮಲಾ ಹಾದಿಮನಿ, ಮೇಘಾ ಮುದಗಲ್,
ಅಮೃತಾ ಪಾಟೀಲ, ಹಿಂದುಳಿದ ವರ್ಗಗಗಳ ಕಲ್ಯಾಣಾಧಿಕಾರಿ ಎಸ್.ಎಸ್. ತವನಪ್ಪ ನವರ, ಪ್ರಶಾಂತ ಮುಧೋಳ, ಎನ್.ಸಿ. ಕುಂಬಾರ, ಮಲ್ಲು ಕುಂಬಾರ, ಜಕ್ಕಪ್ಪ ಕುಂಬಾರ, ಆನಂದ ಚಕ್ರಸಾಲಿ, ಮಂಜು ನಾಥ ಕುಂಬಾರ, ಯಲ್ಲಪ್ಪ ಕುಂಬಾರ, ವೀರಣ್ಣ ಕುಂಬಾರ, ಮಹದೇವಪ್ಪ ಕುಂಬಾರ ಇದ್ದರು.
ಸುರೇಶ ಕುಂಬಾರ ಸ್ವಾಗತಿಸಿದರು. ಮಾರುತಿ ಕುಂಬಾರ ನಿರೂಪಿಸಿದರು. ಶಿವಾನಂದ ಚಕ್ರಸಾಲಿ ವಂದಿಸಿದರು.
ಕುಂಬಾರರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾಗಿದೆ – ಗದಗ ನಗರಸಭೆ ಅಧ್ಯಕ್ಷೆ ಶಿವಲೀಲಾ ಅಕ್ಕಿ
Kulal news
1 Min Read