ಬ್ರಹ್ಮಾವರ : ಕುಲಾಲ ಸಮಾಜ ಸೇವಾ ಸಂಘ ಬ್ರಹ್ಮಾವರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮ ಆ. ೨೧, ರವಿವಾರ ಚೇರ್ಕಾಡಿ ಶಾರದಾ ಪ್ರೌಢ ಶಾಲೆಯಲ್ಲಿ ಜರಗಿತು.
ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸುಧಾಕರ ಕುಲಾಲ್ ಕನ್ನಾರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸಂಘದಿಂದ ಕುಲಾಲ ಸಮಾಜದ ಪರವಾಗಿ ಸಚಿವರನ್ನು ಸಮ್ಮಾನಿಸಲಾಯಿತು.
ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಆರೂರು ಗ್ರಾ.ಪಂ. ಅಧ್ಯಕ್ಷ ರಾಜೀವ ಕುಲಾಲ್, ಮುಖ್ಯೋಪಾಧ್ಯಾಯ ಸಿ.ಮಂಜುನಾಥ ನಾಯ್ಕ್, ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಮಂಜುನಾಥ ಕುಲಾಲ್, ಹಿರಿಯ ಮಾರ್ಗದರ್ಶಕ ಕೋಟಿ ಕುಲಾಲ್ ಮುದ್ದೂರು ಮತ್ತಿತರರು ಉಪಸ್ಥಿತರಿದ್ದರು.
ಕುಲಾಲ ಸಮಾಜದ 52 ವಿದ್ಯಾರ್ಥಿಗಳಿಗೆ ಸುಮಾರು 60,000 ರೂ. ವಿದ್ಯಾರ್ಥಿ ವೇತನ, 9 ಮಂದಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೆರವೇರಿತು. ಸಂಘದ ವತಿಯಿಂದ ಕಾರ್ಕಳ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಸ್ಯೆ ಪ್ರಮೀಳಾ ಮೂಲ್ಯ, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನೂತನ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲ್, ಕುಲಾಲ ಸಮಾಜದ ಕಿರುತೆರೆ ನಟಿ ನೇತ್ರಾ ವಡ್ಡರ್ಸೆ ಅವರನ್ನು ಸಮ್ಮಾನಿಸಲಾಯಿತು.
ಸಂಘದ ವ್ಯಾಪ್ತಿಯಲ್ಲಿ ಪ್ರಸ್ತುತ ಮಡಿಕೆ ಮಾಡುತ್ತಿರುವ 15 ಮಂದಿಯನ್ನು ಗುರುತಿಸಿ ಗೌರವಿಸಲಾಯಿತು. ವಿದ್ಯಾನಿಧಿಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ಗಣೇಶ್ ಕುಲಾಲ್ ಆರೂರು ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಬಸವರಾಜ್ ಕುಲಾಲ್ ಪ್ರಸ್ತಾವನೆಗೈದರು. ಕೋಶಾಧಿಕಾರಿ ವಿಶ್ವನಾಥ ಕುಲಾಲ್ ಸಾಸ್ತಾನ ಲೆಕ್ಕಪತ್ರ ಮಂಡಿಸಿ, ನೂತನ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಲಾಲ್ ಸೂರೆಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಿಶ್ವನಾಥ ಕುಲಾಲ್ ವಂದಿಸಿದರು.
ಚಿತ್ರ-ವರದಿ : ಸತೀಶ್ ನಡೂರು