ಉಡುಪಿ : ಪೆರ್ಡೂರು ಕುಲಾಲ ಸಂಘದ ಎಂಟನೇ ವಾರ್ಷಿಕ ಮಹಾಸಭೆ ಹಾಗು ವಿದ್ಯಾ ಪ್ರೋತ್ಸಾಹಧನ ವಿತರಣಾ ಸಮಾರಂಭವು ಇತ್ತೀಚೆಗೆ ಬುಕ್ಕಿಗುಡ್ಡೆ ಕುಲಾಲ ಸಮುದಾಯ ಭವನದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ರಾಮ ಕುಲಾಲ್ ಪಕ್ಕಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಕ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ಸೌಂದರ್ಯ ರಮೇಶ್, ಉಡುಪಿ ಜಿಪಂ ಸದಸ್ಯ ಸುಧಾಕರ ಶೆಟ್ಟಿ ಮೈರ್ಮಾಡಿ, ಐತು ಕುಲಾಲ್ ಕನ್ಯಾನ, ಸತೀಶ್ ಕುಲಾಲ್ ಕಡಿಯಾಳಿ, ಶ್ಯಾಮಲಾ ಕುಲಾಲ್, ಪ್ರಫುಲ್ಲಾ ಕುಲಾಲ್, ಗಣೇಶ್ ಕುಲಾಲ್ ಪಕ್ಕಾಲು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಸದಸ್ಯೆ ಸುಪ್ರೀತಾ ಕುಲಾಲ್, ತಾಪಂ ಸದಸ್ಯರಾದ ಗೋಪಾಲ ಮೂಲ್ಯ, ಸುಭಾಸ್ ನಾಯ್ಕ್, ಪ್ರಮೀಳಾ ಮೂಲ್ಯ, ಉಪನ್ಯಾಸಕ ದುಗ್ಗಪ್ಪ ಕಜೆಕಾರ್, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ ಪಕ್ಕಾಲ್ ಮುಂತಾದವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕುಲಾಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾ ಪ್ರೋತ್ಸಾಹಧನ ವಿತರಣೆ ನಡೆಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ಕುಲಾಲ ಸಮಾಜದ ಬಂಧುಗಳಿಗಾಗಿ `ಕುಲಾಲ್ ಐಡಲ್’ ಗಾಯನ ಸ್ಪರ್ಧೆ, `ಡಾನ್ಸ್ ಕುಲಾಲ್ ಡಾನ್ಸ್’ ನೃತ್ಯ ಸ್ಪರ್ಧೆ, `ಮಾಸ್ಟರ್ಸ್ ಆಫ್ ಸೆರಮನಿ’ ಕಾರ್ಯಕ್ರಮ ನಿರೂಪಣಾ ಸ್ಪರ್ಧೆ ಮತ್ತು ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣೆಯನ್ನು ಈ ಸಂದರ್ಭ ಮಾಡಲಾಯಿತು. ಸಂಘದ ಸದಸ್ಯರಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.
ಬಹುಮಾನ ವಿಜೇತರ ವಿವರ :
`ಡಾನ್ಸ್ ಕುಲಾಲ್ ಡಾನ್ಸ್’ ನೃತ್ಯ ಸ್ಪರ್ಧೆಯಲ್ಲಿ ಒಟ್ಟು ಹನ್ನೆರಡು ತಂಡಗಳು ಭಾಗವಹಿಸಿದ್ದವು.
ವಿನ್ನರ್ : ಮುಖೇಶ್ ಮತ್ತು ತಂಡ, ಮಂಗಳೂರು
ರನ್ನರ್ : ಆಶಿಕಾ ಮತ್ತು ತಂಡ ಪೆರ್ಡೂರು
`ಕುಲಾಲ್ ಐಡಲ್’ ಗಾಯನ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಗೊಂಡ ಸ್ಪರ್ಧಿಗಳು 10
ವಿನ್ನರ್ : ಯಮುನಾ ಹಿರಿಯಡ್ಕ
ರನ್ನರ್ : ಶ್ರೀಲಕ್ಷ್ಮೀ ಪಕ್ಕಾಲು
`ಮಾಸ್ಟರ್ಸ್ ಆಫ್ ಸೆರಮನಿ’ ಭಾಗವಹಿಸಿ ಸ್ಪರ್ಧಿಗಳು 8
ವಿನ್ನರ್ : ಅಕ್ಷತಾ ಕುಲಾಲ್ ಕುಂಟಾಲ್ಕಟ್ಟೆ
ರನ್ನರ್ : ರಾಕೇಶ್ ಕುಲಾಲ್ ಚೇರ್ಕಾಡಿ