ಬೆಳಗಾವಿ : ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಇಳಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಮೃತಪಟ್ಟಿದ್ದ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಕುಂಬಾರ ಗಲ್ಲಿಯ ಯೋಧ ಸಾಗರ ಬಸವರಾಜ ಕುಂಬಾರ ಅವರ ದೇಹ ಶುಕ್ರವಾರ ಸ್ವಗ್ರಾಮ ತಲುಪಿತು.
ರಾಜಸ್ತಾನ ರೆಜಿಮೆಂಟಲ್ ನ್ಯಾಷನಲ್ ರೈಫಲ್ಸ್ ಫೋರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಗರ ಕುಂಬಾರ, ಕೆಲ ತಿಂಗಳ ಹಿಂದಷ್ಟೇ ಶ್ರೀನಗರಕ್ಕೆ ವರ್ಗಾವಣೆಯಾಗಿದ್ದರು. 2012ರಲ್ಲಿ ಕೊಪ್ಪಳದಲ್ಲಿ ಭಾರತೀಯ ಸೇನೆಗೆ ಆಯ್ಕೆ ಆಗಿದ್ದರು. ಮೃತ ಯೋಧರಿಗೆ ಇಬ್ಬರು ಸಹೋದರಿಯರು ಹಾಗೂ ತಾಯಿ ಇದ್ದಾರೆ. ವರ್ಷದ ಹಿಂದಷ್ಟೇ ಸಾಗರ್ ತಂದೆ ಬಸವರಾಜ ಮೃತಪಟ್ಟಿದ್ದರು. ಸೈನಿಕನ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಯೋಧ ಸಾಗರ ಕುಂಬಾರ ಅವರ ಅಂತಿಮ ದರ್ಶನಕ್ಕಾಗಿ ಮಹಾಲಕ್ಷ್ಮಿ ದೇವಸ್ಥಾನದ ಎದುರಿನ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಯೋಧನ ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ತಾಯಿ ಮಹಾದೇವಿ, ತಂಗಿಯರಾದ ಸುರೇಖಾ, ಕಾವೇರಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಸ್ವಗ್ರಾಮ ತಲುಪಿದ ಯೋಧ ಸಾಗರ ಕುಂಬಾರ ಮೃತದೇಹ
Kulal news
1 Min Read