ಕೊಟ್ಟವರಾರು…?
ನಿನ್ನಾ ನಗುವ ಕಡಲಲ್ಲಿ
ಕರಗುವ ಮಂಜುಗಡ್ಡೆಯಾದೆ ನಾ
ಹುಚ್ಚು ಕುದುರೆಯಂತೆ ಓಡುತ್ತಿದ್ದ
ಮನಸ್ಸನ್ನು ಕಟ್ಟಿ ಹಾಕಿದವಳು ನೀನೇನಾ ?
ಓ ಗೆಳತೀ ನನಗೂ ಹೇಳುವೆಯಾ
ಯಾರು ಕೊಟ್ಟರು ನಿನಗೆ ಆಯಾ ಶಕ್ತಿನಾ ?
ಅರ್ಥವಾಗದ್ದು…!
ಜಗತ್ತಿನಲ್ಲಿ ಎಲ್ಲಕ್ಕಿಂತ ಶ್ರೇಷ್ಠ
ತಾಯಿ ಪ್ರೀತಿ ಎನ್ನುತ್ತಾರೆ
ತಾಯಿಗಿಂತ ಮಿಗಿಲಾದುದು
ಯಾವುದೂ ಇಲ್ಲವೆನ್ನುತ್ತಾರೆ
ಯಾಕೆಂದು ನನಗೆ ಅರ್ಥವಾಗುತ್ತಿಲ್ಲ..
ಯಾಕೆಂದರೆ ನನ್ನನ್ನು ಅನಾಥ
ಎಂದು ಕರೆಯುತ್ತಾರೆ !
* ಸುಖಾನಂದ ಕುಲಾಲ್