ಮಂಗಳೂರು : ಮನಸ್ಸಿದ್ದರೆ ಮಾರ್ಗ ಅನ್ನುವ ಗಾದೆಗೆ ಪೂರಕವಾಗಿ ಬೆಂಗಳೂರು ದಾಸರಹಳ್ಳಿಯ `ಪವರ್ ಇಲೆವೆನ್’ ತಂಡವು ಬಡ ಕುಲಾಲ ಕುಟುಂಬದ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಆಯೋಜಿಸುವ ಮೂಲಕ ಒಂದು ದಿಟ್ಟ ಹೆಜ್ಜೆ ಇಟ್ಟಿದೆ.
`ಪವರ್ ಇಲೆವೆನ್’ ತಂಡವು 2015ರ ನವೆಂಬರ್ ತಿಂಗಳಲ್ಲಿ ಪವರ್ ಕಪ್ ಟೂರ್ನಿಯನ್ನು ಆಯೋಜಿಸಿತ್ತು. ಬಹಳಷ್ಟು ವಿಜ್ರಂಭಣೆಯಿಂದ ನಡೆದ ಈ ಪಂದ್ಯ ಕೂಟದಲ್ಲಿ ಖರ್ಚಾಗಿ ಉಳಿದ ಹಣವನ್ನು ಉಡುಪಿ ಹತ್ತಿರದ ಮೂಡುಬೆಳ್ಳೆ ಗ್ರಾಮದ ಕೊಂಬೈಲು ಸಡಂಬೈಲು ನಿವಾಸಿ ದಿವಂಗತ ಶಂಕರ ಮೂಲ್ಯ ಅವರ ಪತ್ನಿ ಯಶೋದ ಎಂಬವರ ಬಡ ಕುಟುಂಬಕ್ಕೆ ನೀಡಿ ಅವರ ಕಷ್ಟಕ್ಕೆ ನೆರವಾಗುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಯಶೋದ ಅವರ ಪತಿ ಮಾರಣಾಂತಿಕ ಕಾಯಿಲೆಯಿಂದ ಮೃತಪಟ್ಟಿದ್ದರು. ಪ್ರಸ್ತುತ ಯಶೋದಾ ಅವರೂ ರೋಗಕ್ಕೆ ತುತ್ತಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಕುಟುಂಬವು ಮೂಲಭೂತ ಸೌಕರ್ಯ ವಂಚಿತವಾಗಿದ್ದು, ವಿಪರೀತ ಆರ್ಥಿಕ ಆರ್ಥಿಕ ಸಮಸ್ಯೆಯಿಂದ ನಲುಗುತ್ತಿದೆ. ಇವರ ಸಂಕಷ್ಟವನ್ನು ಅರಿತು ಬಂಟಕಲ್ಲು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಹಯೋಗದೊಂದಿಗೆ `ಪವರ್ ಇಲೆವೆನ್’ ತಂಡವು ಸುಮಾರು ಒಂದು ಲಕ್ಷ ರೂಪಾಯಿ ನೀಡಲು ಯೋಜಿಸಿದೆ.
ಆಗಸ್ಟ್ 21, ಭಾನುವಾರದಂದು ಯಶೋದಾ ಅವರ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ `ಪವರ್ ಇಲೆವೆನ್’ ತಂಡದ ಶಿವಾನಂದ ಬಂಟಕಲ್ಲು ಅಧ್ಯಕ್ಷತೆ ವಹಿಸಲಿದ್ದು, ಕುತ್ಯಾರು ಪ್ರಸಾದ್ ಶೆಟ್ಟಿ, ರಾಮಚಂದ್ರ ಪ್ರಭು, ಮೇಘನಾಥ ಆಚಾರ್ಯ, ಪುಂಡಲೀಕ ಮರಾಠೆ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮತ್ತೊಬ್ಬರಿಗೆ ಮಾದರಿ ಅನ್ನುವ ರೀತಿ ಮೆಚ್ಚುಗೆಯ ಕೆಲಸವನ್ನು ಕೈಗೊಂಡಿರುವ `ಪವರ್ ಇಲೆವೆನ್ ತಂಡದ ಈ ಕಾರ್ಯಕ್ಕೆ ಆಲ್ ದಿ ಬೆಸ್ಟ್ ಎನ್ನೋಣ .
ದಾಸರಹಳ್ಳಿ `ಪವರ್ ಇಲೆವೆನ್’ ತಂಡದಿಂದ ಬಡ ಕುಲಾಲ ಕುಟುಂಬದ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಕಾರ್ಯಕ್ರಮ
Kulal news
1 Min Read