ಮಂಡ್ಯ : ಆಧುನೀಕತೆಯ ಭರಾಟೆಯಿಂದ ಕುಂಬಾರರ ಕುಲಕಸುಬು ಅವನತಿಯ ಅಂಚಿನಲ್ಲಿದ್ದು, ಆರ್ಥಿಕ ಸ್ವಾವಲಂಭನೆಗಾಗಿ ಪರ್ಯಾಯ ವೃತ್ತಿಯನ್ನು ಅವಲಂಭಿಸುವಂತೆ ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಸಲಹೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದಲ್ಲಿ ನಡೆದ ತಾಲೂಕು ಕುಂಬಾರರ ಸಂಘದ ವತಿಯಿಂದ ನಡೆದ ಕುಂಬಾರರ ಜಾಗೃತಿ ಅಭಿಯಾನ-ಸಂಘದ ನಡಿಗೆ ಕುಂಬಾರರ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಂಬಾರರು ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ಕೊಡಬೇಕು. ಸಾಮಾಜಿಕ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುವುದರ ಮೂಲಕ ಅಭಿವೃದ್ಧಿಯನ್ನು ಹೊಂದಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಹಿಂದುಳಿದ ಸಮುದಾಯಗಳು ರಾಜಕೀಯ ಸೂಕ್ಷ್ಮತೆಗಳನ್ನು ಬಳಸಿಕೊಳ್ಳಬೇಕು. ಸಾಮಾಜಿಕ ನ್ಯಾಯದ ನಾಯಕತ್ವವನ್ನು ಗಟ್ಟಿಯಾಗಿ ಬೆಂಬಲಿಸಬೇಕು ಎಂದ ಅವರು, ಸಂಘಟಿತ ಹೋರಾಟದಿಂದ ಮಾತ್ರ ಹಿಂದುಳಿದವರು ಹಲವು ಕ್ಷೇತ್ರಗಳಲ್ಲಿ ಮೀಸಲಾತಿ ಪಡೆಯಬಹುದು ಎಂದು ತಿಳಿಸಿದರು.
ಅರಸು ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಸವಲತ್ತನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ಕುಂಬಾರರು ಸೇರಿದಂತೆ ಅತಿ ಹಿಂದುಳಿದ ಸಮಾಜದ ಮಕ್ಕಳಿಗೆ ಎಸ್.ಎಸ್.ಎಲ.ಸಿ. ನಂತರ ಉಚಿತ ಶಿಕ್ಷಣ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಂಬಾರ ಸಂಘದ ಅಧ್ಯಕ್ಷ ಎಂ. ಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕುಂಬಾರ ಸಮುದಾಯವನ್ನು ಜಾಗೃತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಪ್ರತಿ ಹೋಬಳಿ ಕೇಂದ್ರದಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದು ಪ್ರತಿಪಾದಿಸಿದರು.
ಕುಂಬಾರರಿಗೆ ಪ್ರಬಲ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಎಲ್ಲಾ ಪಕ್ಷಗಳನ್ನು ನಮ್ಮಿಂದ ಜತೆ ಮಾಡಿಸಿಕೊಳ್ಳುತ್ತಿವೆ. ಆದರೆ ಸೂಕ್ತ ಫಲ ನೀಡುತ್ತಿಲ್ಲ. ಸದನದ ಒಳಗು ನಮ್ಮ ಧನಿ ಇಲ್ಲ ಎಂದ ಅವರು, ಕುಂಭ ಕಲಾ ಮಂಡಳಿಗೂ 50 ಕೋಟಿ ರೂ. ಅನುದಾನ ನೀಡುವಂತೆ ಆಗ್ರಹಿಸಿದರು.
ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಕೃಷ್ಣೇಗೌಡ, ಸದಸ್ಯರಾದ ನಾಗೇಶ್, ಎ.ಜೆ. ರವಿ, ಪ್ರಭಾಕರ್ ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು. ಕುಂಬಾರ ಸಮಾಜದ ಮುಖಂಡರಾದ ವೆಂಕಟೇಶ್, ಮಂಜು, ನಾಗರಾಜ, ಮರಿಯಪ್ಪ, ಜವರಾಯಿ, ಅರಕೇಶ್ ಕೆರಗೋಡು, ವೆಂಕಟೇಶ್, ಕಾಂತರಾಜು, ಹುಲ್ಲುಕೆರೆ ವೆಂಕಟೇಶ್, ಸತೀಶ್, ರವಿ ಮತ್ತು ಮಡಿವಾಳ ಸಮಾಜದ ಮುಖಂಡ ಸಿ. ಸಿದ್ದಶೆಟ್ಟಿ ಇತರರು ಉಪಸ್ಥಿತರಿದ್ದರು.
ಕುಂಬಾರರು ಪರ್ಯಾಯ ವೃತ್ತಿ ಅವಲಂಬಿಸಲು ಮಂಡ್ಯ ನಗರಸಭೆ ಅಧ್ಯಕ್ಷ ಕರೆ
Kulal news
2 Mins Read