ಮಂಗಳೂರು : ನಾಗರ ಪಂಚಮಿ ಹಬ್ಬವನ್ನು ತುಳುನಾಡಿನೆಲ್ಲೆಡೆ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ನಾಗನಿಗೆ ವರ್ಷಕ್ಕೊಮ್ಮೆ ತನು ಧಾರೆ ಎರೆದರೆ ಕಷ್ಟ-ಕಾರ್ಪಣ್ಯ ಕಳೆದು ಸುಖೀ ಜೀವನ ನಡೆಸಬಹುದು ಅನ್ನೋದು ತುಳುವರ ನಂಬಿಕೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಾಗಕ್ಷೇತ್ರಗಳಲ್ಲಿ ಮುಂಜಾನೆಯಿಂದಲೇ ಭಕ್ತರ ಸಂಖ್ಯೆ ಹೆಚ್ಚಿದ್ದು ಸಂಭ್ರಮ, ಸಡಗರದ ವಾತಾವರಣ ಕಂಡುಬಂದಿದೆ.
ಕುಲಾಲ ಸಮುದಾಯದ ವಿವಿಧ ಮೂಲಸ್ಥಾನಗಳಲ್ಲಿ ನಾಗರಪಂಚಮಿ ಪ್ರಯುಕ್ತ ನಾಗನ ಕಟ್ಟೆಯಲ್ಲಿ ನಾಗದೇವರಿಗೆ ಹಾಲಿನ ಅಭಿಷೇಕ, ತಂಬಿಲ ನಡೆಯಿತು.
ತೊಕ್ಕೊಟ್ಟು ಬರ್ದೆ ಅಂಬಿಕಾ ರೋಡ್ ಬಂಜನ್ ಮೂಲಸ್ಥಾನ, ಮಳಲಿ ಪೂವಾರ್ ಬಂಜನ್ ಮೂಲಸ್ಥಾನ, ಕುಂಜತ್ತೋಡಿ ಅಡ್ಕ ಬಂಗೇರ ಕುಟುಂಬ ಮೂಲಸ್ಥಾನ ಹಾಗೂ ನೀರುಮಾರ್ಗ ಬಂಜನ್ ಮೂಲಸ್ಥಾನಗಳಲ್ಲಿ ನಡೆದ ತನುತರ್ಪಣದ ದೃಶ್ಯಗಳನ್ನು ಚಿತ್ರದಲ್ಲಿ ಕಾಣಬಹುದು .
ವಿವಿಧ ಕುಲಾಲ ಮೂಲಸ್ಥಾನಗಳಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ
Kulal news
1 Min Read