ಸುಳ್ಯ : ನಾಗರೀಕತೆ ಪ್ರಥಮವಾಗಿ ಪ್ರಾರಂಭವಾಗಿದ್ದೇ ಕುಂಬಾರ ಚಕ್ರದ ತಿರುಗುವಿಕೆಯಿಂದ ಎಂದು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರೋಹಿಣಾಕ್ಷ ಹೇಳಿದರು.
ಜುಲೈ 31ರಂದು ಅಂಬೇಡ್ಕರ್ ಭವನದಲ್ಲಿ ನಡೆದ ಸುಳ್ಯ-ಬೆಳ್ಳಾರೆ ಕುಲಾಲ ಸುಧಾರಕ ಸೇವಾ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಂಘಟನೆ,ಶಿಕ್ಷಣ,ಹೋರಾಟ ಈ ಮೂರು ಸೂತ್ರ ಅಗತ್ಯವೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಧಾಕೃಷ್ಣ ಕುಲಾಲ್ ಬಸ್ತಿಗುಡ್ಡೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಲಾಲ ಸ್ವಜಾತಿ ಬಾಂಧವರಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಐದು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ವಿದ್ಯಾರ್ಥಿವೇತನಕಾಗಿ ಅರ್ಜಿ ಸಲ್ಲಿಸಿದ 19 ವಿದ್ಯಾರ್ಥಿಗಳಿಗೆ ರೂ. 11,500 ವಿದ್ಯಾರ್ಥಿವೇತನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಅತಿಥಿ ರೋಹಿಣಾಕ್ಷರವರನ್ನು ಸಂಘದ ವತಿಯಿಂದ ಶ್ರೀ ಕೃಷ್ಣಪ್ಪ ಮೂಲ್ಯರವರು ಫಲಪುಷ್ಪ ನೀಡಿ ಸನ್ಮಾನಿಸಿದರು. ಸಂಘದ ಬೆನ್ನೆಲುಬಾಗಿರುವ , ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಕೃಷ್ಣಪ್ಪ ಮೂಲ್ಯ-ಬೆಳ್ಳಾರೆ ಯವರು ಸಂಘದ ಪದಾಧಿಕಾರಿಗಳಿಗೆ ಹಿತವಚನವನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅರಂಬೂರಿನಲ್ಲಿ ನಡೆದ ಕುಲಾಲ ಸ್ವಜಾತಿ ಬಾಂಧವರ ಕ್ರೀಡಾಕೂಟದ ಬಹುಮಾನ ವಿಜೇತರಿಗೆ ಸರ್ವಜ್ಞ ಫಲಕವನ್ನು ಬಹುಮಾನವಾಗಿ ನೀಡಲಾಯಿತು. ಜುಲಾಯಿ 10 ರಂದು ಪಂಜಿಗಾರು ಉಮೇಶ್ ಕುಲಾಲರ ಕೆಸರು ಗದ್ದೆಯಲ್ಲಿ ನಡೆದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಆನಂದ ಕುಲಾಲ್ ಶಾಂತಿನಗರ ಪ್ರಾರ್ಥನೆ ಮಾಡಿದರು, ನಮಿತಾ ಉಮೇಶ್ ಅತಿಥಿಗಳ ಪರಿಚಯ ಭಾಷಣ ಮಾಡಿದರು,ನಾಗೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಮೀನಾಕ್ಷಿ.ಪಿ.ವೈ.ಮೂಲ್ಯ ವಂದಿಸಿದರು. ಮಧ್ಯಾಹ್ನದ ಭೋಜನದ ನಂತರ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಚಿತ್ರ-ವರದಿ: ಉಮೇಶ್ ಪಂಜಿಗಾರು
ಅಮೂಲ್ಯ ನಿಲಯ ಪಂಜಿಗಾರು, ಬಾಳಿಲ