ಉಡುಪಿ : ಕುಲಾಲ ಸಂಘ ಪೆರ್ಡೂರು ಇದರ ವಾರ್ಷಿಕೋತ್ಸವದ ಅಂಗವಾಗಿ ಕುಲಾಲ ಸಮಾಜದ ಬಂಧುಗಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಜುಲೈ ೩೧ರಂದು ಸಂಘದ ಭವನದಲ್ಲಿ ನಡೆಯಿತು. ಹೆಬ್ರಿಯ ಉದ್ಯಮಿ, ಸಂಘದ ಗೌರವಾಧ್ಯಕ್ಷ ಐತು ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುರುಷರಿಗಾಗಿ 400×100 ರಿಲೇ , ಹಗ್ಗ ಜಗ್ಗಾಟ, ಸ್ಲೋ ಬೈಕ್ ರೈಡಿಂಗ್, ಸಂಗೀತ ಸ್ಪರ್ಧೆ, ಫುಟ್ ಬಾಲ್, ವಾಟರ್ ಫಿಲ್ಲಿಂಗ್ ರಿಲೇ ಮುಂತಾದ ಸ್ಪರ್ಧೆಗಳು ನಡೆದರೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ತ್ರೋ ಬಾಲ್, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ, ಸಂಗೀತ ಸ್ಪರ್ಧೆ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ,4×50 ರಿಲೇ , ರಸ ಪ್ರಶ್ನೆ ಮುಂತಾದ ಸ್ಪರ್ಧೆಗಳು ನಡೆಯಿತು. ಸಮಾಜ ಬಾಂಧವರು ಈ ಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಪೆರ್ಡೂರು ಕುಲಾಲ ಸಂಘದಲ್ಲಿ ಕ್ರೀಡಾಕೂಟ
sports
1 Min Read
