ವಿಟ್ಲ : ಇಲ್ಲಿನ ಯುವ ಕುಂಬಾರರ ಯಾನೆ ಕುಲಾಲರ ಸಂಘ ಇವರಿಂದ ೫ನೇ ವರ್ಷದ ವನಮಹೋತ್ಸವ, ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವು ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಇತ್ತೀಚೆಗೆ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, `ಸ್ವಜಾತಿ ಬಾಂಧವರು ದುರ್ಬಲ ವರ್ಗದ ಜನರಿಗೆ, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ನೆರವಾಗಬೇಕು ಮತ್ತು ಯುವಕರು ಇಂಥ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಈ ಕೆಲಸ ಮಾಡುತ್ತಿರುವ ವಿಟ್ಲ ಯುವ ಕುಂಬಾರರು ಶ್ಲಾಘನೀಯರು’ ಎಂದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾ೦ಕಿನ ವ್ಯವಸ್ಥಾಪಕ ಉಮೇಶ್ ಪಿ.ಕೆ, ಇದೇ ಬ್ಯಾ೦ಕಿನ ನಿರ್ದೇಶಕ ಜನಾರ್ಧನ ಬೊಂಡಾಲ, ಮಡಕೆ ತಯಾಯಕರಾದ ಸೇಸಪ್ಪ ಮೂಲ್ಯ ಪೆರುವಾಯಿ ಮತ್ತಿತರರು ಭಾಗವಹಿಸಿದ್ದರು.
ಎಎಸ್ ಐ ಕಿಟ್ಟು ಮೂಲ್ಯ, ವಿಜಯ್ ಕುಮಾರ್ ಕೋಡಿ, ರವಿ ಕುಮಾರ್ ಕಟ್ಟೆ, ಕುಲದೀಪ ಅಳಿಕೆ, ರವಿ, ಅರುಣ್, ಶರಣ್ ಅಲಂಗಾರ್ ಮುಂತಾದವರು ಉಪಸ್ಥಿತರಿದ್ದರು. ಸಮಾಜದ ೧೨೦ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಹಿಮೋಫೀಲಿಯಾದಿಂದ ಬಳಲುತ್ತಿರುವ ಚೇತನ ಪುಣಚ ಮಲೆತ್ತಡ್ಕ ಅವರಿಗೆ ಧನ ಸಹಾಯ ವಿತರಿಸಲಾಯಿತು. ಸಂಘದ ಅಧ್ಯಕ್ಷ ಉಮೇಶ್ ಕಾಶೀಮಠ, ಸಂಘದ ಕಾರ್ಯದರ್ಶಿ ಪದ್ಮನಾಭ ಕಟ್ಟೆ, ಪವನ್ ಕಟ್ಟೆ, ಪವನ್ ಕಟ್ಟೆ, ವಿನೋದ್ ಕೋಡಿ, ಚೈತ್ರಾ ಆಲಂಗಾರು ಅವರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದ್ದರು.
ವಿಟ್ಲ ಯುವ ಕುಂಬಾರರ ಯಾನೆ ಕುಲಾಲರ ಸಂಘದಲ್ಲಿ ಆಟಿಡೊಂಜಿ ಗಮ್ಮತ್, ವನಮಹೋತ್ಸವ, ಪ್ರತಿಭಾ ಪುರಸ್ಕಾರ
Banner
1 Min Read