ಕುಂದಾಪುರ : ವಿಧಿಯ ಅಟ್ಟಹಾಸಕ್ಕೆ ಸಿಲುಕಿದ ಇವರ ಬಲಗಾಲಿನ ಮಾಂಸಖಂಡ ಸಂಪೂರ್ಣ ಕೊಳೆತು ಹೋಗಿದೆ. ಇದರ ಜೊತೆ ತಡೆಯಲಾರದ ನೋವು. ದಿನೇ ದಿನೇ ಏರುತ್ತಿರುವ ಆಸ್ಪತ್ರೆಯ ಬಿಲ್ಲು.. ಮನೆಯಲ್ಲಿ ಕಿತ್ತು ತಿನ್ನುವ ಬಡತನ.. ,
ಹೀಗೆ ಎಲ್ಲವನ್ನೂ ನೆನೆದು ಆಸ್ಪತ್ರೆಯ ಬೆಡ್ಡಿನಲ್ಲಿ ಹೀಗೆ ಅಸಹಾಯಕರಂತೆ ತಲೆಗೆ ಕೈ ಹೊತ್ತು ಮಲಗಿರುವ ವ್ಯಕ್ತಿ ಮಹಾಬಲ ಕುಲಾಲ್. ಹಲವು ವರ್ಷಗಳಿಂದ ಅಸಹನೀಯ ರೋಗದಿಂದ ಬಳಲುತ್ತಿರುವ ಕುಂದಾಪುರ ಬಿಲ್ಲಾಡಿಯ ಕುಪ್ಪನಾಡಿ ನಿವಾಸಿ ಮಹಾಬಲ ಕುಲಾಲರ ಕರುಣಾಜನಕ ಸ್ಥಿತಿ ನೋಡಿದರೆ ಎಂಥವರಿಗಾದರೂ ಮರುಕ ಹುಟ್ಟುತ್ತದೆ. ಕೃಷಿ ವೃತ್ತಿ ಮಾಡಿಕೊಂಡಿದ್ದ ಕುಲಾಲ್ ಅವರ ಬಲಗಾಲಿಗೆ ಅದ್ಯಾವ ಕೆಟ್ಟ ಘಳಿಗೆಯಲ್ಲಿ ಕಬ್ಬಿಣದ ಮೊಳೆಯೊಂದು ಹೊಕ್ಕಿತೋ ಅಂದಿನಿಂದ ಬಾಳಿನ ನೆಮ್ಮದಿಯೇ ಹೊರಟು ಹೋಯಿತು.
ಕಾಲಿನ ಗಾಯ ದಿನೇ ದಿನೇ ಉಲ್ಬಣಗೊಂಡಿತು. ಔಷಧಿ ಹಚ್ಚಿದಷ್ಟೂ ಗಾಯ ಇಡೀ ಕಾಲನ್ನು ಆಕ್ರಮಿಸಿಕೊಂಡು ಮಾಂಸಖಂಡವೇ ಕೊಳೆತು ಹೋಗಲಾರಂಭಿಸಿತು. ಅಪ್ಪನಿಗೆ ಅನಿರೀಕ್ಷಿತವಾಗಿ ತಗುಲಿದ ಈ ರೋಗದ ಮದ್ದಿಗಾಗಿ ದಿನಗೂಲಿ ಕೆಲಸ ಮಾಡುವ ಮಗ ಈಗಾಗಲೇ ಸಮಾರು ಕಡೆ ಸಾಲ ಮಾಡಿ 3 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದೀಗ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಾಗಿರುವ ಮಹಾಬಲ ಕುಲಾಲ್ ಅವರ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಈ ಕುಟುಂಬ ಪರದಾಡುತ್ತಿದೆ.
ಇಳಿ ವಯಸ್ಸಿನಲ್ಲಿ ನರಕಯಾತನೆ ಅನುಭವಿಸುತ್ತಿರುವ ಮಹಾಬಲ ಕುಲಾಲರ ಈ ರೋಗ ಗುಣಪಡಿಸಲು ತುರ್ತು ಹಣದ ಅವಶ್ಯಕತೆ ಇದೆ. ಆಸ್ಪತ್ರೆಯ ಖರ್ಚನ್ನು ಭರಿಸುವ ಶಕ್ತಿ ನಮ್ಮಲ್ಲಿಲ್ಲ. ಸಹೃದಯ ದಾನಿಗಳು ಉದಾರ ಆರ್ಥಿಕ ಸಹಾಯ ಮಾಡುವ ಮೂಲಕ ಜೀವ ಉಳಿಸಿಕೊಡಿ ಎಂದು ಮಹಾಬಲ ಅವರ ಪತ್ನಿ-ಮಗ ಮನವಿ ಮಾಡಿದ್ದಾರೆ.
ದಾನಿಗಳು ತಮ್ಮ ಕೈಲಾದ ಧನ ಸಹಾಯವನ್ನು ಮಹಾಬಲ ಅವರ ಕೆಳಗಿನ ಬ್ಯಾ೦ಕಿಗೆ ಜಮಾ ಮಾಡಬಹುದಾಗಿದೆ.
Mr. Mahabala
S/O Sadiya
Kuppanadi, billadi
P.O- Janvarkatte
SYNDICATE BANK, Kokkarne Branch
S.B A/C No : 01522200002841
IFSC No : SYNB0000152
phone : 9740967001