ಮುಂಬಯಿ : ಕುಲಾಲ ಸಂಘ ಮುಂಬಯಿ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭ ಇತ್ತೀಚೆಗೆ
ಗೋರೆಗಾಂವ್ ಪೂರ್ವದ ಐ ಬಿ ಪಟೇಲ್ ರೋಡ್, ಶ್ರೀ ದುರ್ಗಾಮಾತೆ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುಲಾಲ ಸಂಘ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರು ದೀಪ ಬೆಳಗಿಸಿ ಉದ್ದ್ಘಾಟಿಸಿದರು. ಉಪಾಧ್ಯಕ್ಷ ದೇವದಾಸ ಕುಲಾಲ್ ಮಕ್ಕಳಿಗೆ ಪುಸ್ತಕ ವಿತರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಗಣೇಶ್ ಸಾಲ್ಯಾನ್, ಮುಂಡಪ್ಪ ಮೂಲ್ಯ, ಕರುಣಾಕರ ಸಾಲ್ಯಾನ್, ಗೋವಿಂದ ಬಂಜನ್, ಡಾ. ನಿಕೇಶ್ ಮೂಲ್ಯ, ಜಗದೀಶ್ ಮೂಲ್ಯ, ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಆಶಾಲತಾ, ಕೋಶಾಧಿಕಾರಿ ಆರತಿ ಸಾಲ್ಯಾನ್, ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಪ್ರಮೀಳಾ ಮೊದಲಾದವರು ಗೌರವಿಸಿದರು.
ವೇದಿಕೆಯಲ್ಲಿ ಸಂಘದ ಗೌ ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಗೌ. ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯದರ್ಶಿ ಮಮತಾ ಗುಜರನ್, ಐರೋಲಿಯ ಶಿಕ್ಷಕಿ ರೂಪಾ ಶೆಟ್ಟಿ, ಯೋಗ ಗುರು ಡಾ. ಡಿ. ಎಸ್. ತಿವಾರಿ, ಜೋಗೇಶ್ವರಿ ದೇವಿ ಪ್ರಾಸಾದ್ ಹೋಟೇಲಿನ ಮಾಲಕ ಐತು ಆರ್. ಮೂಲ್ಯ ಮುಂಡ್ಕೂರು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಲತಾ ಸಾಲ್ಯಾನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ ಬಂಗೇರ, ಕಲ್ಲಮಾರು, ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು,
ಮಕ್ಕಳ ಜ್ಞಾನ ವಿಕಾಸದ ಬಗ್ಗೆ ಶಿಕ್ಷಕಿ ಜಯಾ ಮುಂಡಪ್ಪ ಮೂಲ್ಯ, ರೂಪಾ ಶೆಟ್ಟಿ ಐರೋಲಿ, ಯೋಗ ಗುರು ಡಾ. ಡಿ. ಎಸ್. ತಿವಾರಿ ಉಪನ್ಯಾಸ ನೀಡಿದರು.
ಪ್ರಾರಂಭದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ನೃತ್ಯ, ಭಜನೆ ನಡೆದವು. ಕಾರ್ಯಕ್ರಮವನ್ನು ಸ್ಥಳೀಯ ಸಮಿತಿಯ ಕಾರ್ಯದರ್ಶಿ ಅರುಣ್ ಬಂಗೇರ ಮತ್ತು ಯುವ ವಿಭಾಗದ ಮನೋಜ್ ಸಾಲ್ಯಾನ್ ನಿರೂಪಿಸಿದರು. ಕೋಶಾಧಿಕಾರಿ ಸತೀಶ್ ಬಂಗೇರ ವಂದಿಸಿದರು.
ಕುಲಾಲ ಸಂಘ ಮುಂಬಯಿ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿ ವತಿಯಿಂದ ಪುಸ್ತಕ ವಿತರಣೆ
Banner
1 Min Read