ಕಾಸರಗೋಡು : ಕೇರಳ ಸರಕಾರದಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಲಭಿಸುವ ಕುಲಾಲ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
೨೦೧೫-೧೬ ನೇ ಸಾಲಿನ ಕೇರಳ ಎಸ್ಸೆಸ್ಸೆಲ್ಸಿ ಮತ್ತು ಪ್ಲಸ್ ಟುನಲ್ಲಿ ಶೇಕಡಾ ಅರುವತ್ತಕ್ಕಿಂತ ಅಧಿಕ ಅಂಕ ಗಳಿಸಿರುವ ಕುಲಾಲ ಸಮಾಜದ ವಿದ್ಯಾರ್ಥಿಗಳು ಅಂಕ ಪಟ್ಟಿಯ ನಕಲು ಪ್ರತಿ, ಪಾಸ್’ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಆಯಾಯ ಪಂಚಾಯತ್ ವ್ಯಾಪ್ತಿಯ ಕುಲಾಲ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಯನ್ನು ಕೂಡಲೇ ಸಂಪರ್ಕಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 8. ಹೆಚ್ಚಿನ ಮಾಹಿತಿಗಾಗಿ 9495341367 ಅಥವಾ 9447653012 ಅಥವಾ 9481505619 ನಂಬರನ್ನು ಸಂಪರ್ಕಿಸಲು ಕಾಸರಗೋಡು ಕುಲಾಲ ಸುಧಾರಕ ಸಂಘದ ಮಂಜೇಶ್ವರ ಹೊಸಬೆಟ್ಟು ಸಮಿತಿ ತಿಳಿಸಿದೆ.
ಕುಲಾಲ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
Students corner
1 Min Read
