ಮಂಗಳೂರು : ನವ ವಿವಾಹಿತರೊಬ್ಬರು ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ತೊಕ್ಕೊಟ್ಟು ಸಮೀಪ ಕೊಲ್ಯ ಜಾಯ್ ಲ್ಯಾ೦ಡ್ ಶಾಲೆ ಮುಂಭಾಗದಲ್ಲಿ ನಡೆದಿದೆ.
ಮೃತರನ್ನು ಕೊಲ್ಯ ಸಾರಸ್ವತ ಕಾಲನಿ ನಿವಾಸಿ ಪ್ರಶಾಂತ್ ಮೂಲ್ಯ (35) ಎನ್ನಲಾಗಿದ್ದು, ಶನಿವಾರದಂದು ಮನೆಯಲ್ಲೇ ಇದ್ದ ಇವರು ತೊಕ್ಕೊಟ್ಟು ಕಡೆಗೆ ಹೋಗಿ ಮನೆಗೆ ವಾಪಸ್ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸೋಮೇಶ್ವರ ಪಂಚಾಯಿತಿನ ಗ್ರಂಥಾಲಯದಲ್ಲಿ ಖಾಯಂ ಉದ್ಯೋಗಿಯಾಗಿದ್ದು, ಜೊತೆಗೆ ಪಿಗ್ಮಿ ಹಣ ಸಂಗ್ರಹಿಸುವ ಕಾಯಕವನ್ನು ಮಾಡುತ್ತಿದ್ದ ಪ್ರಶಾಂತ್ ಅವರು ಎರಡು ತಿಂಗಳ ಹಿಂದಷ್ಟೇ ಮಾಡೂರಿನ ಯುವತಿಯನ್ನು ವಿವಾಹವಾಗಿದ್ದರು. ಹುಟ್ಟು ಅಂಗವೈಕಲ್ಯವನ್ನು ಹೊಂದಿದ್ದ ಅವರು ಹೆತ್ತವರಿಗೆ ಒಬ್ಬನೇ ಪುತ್ರರಾಗಿದ್ದರು.
ಕೊಲ್ಯ : ರೈಲು ಡಿಕ್ಕಿ ಹೊಡೆದು ನವ ವಿವಾಹಿತ ಪ್ರಶಾಂತ್ ಮೂಲ್ಯ ಮೃತ್ಯು
Kulal news
1 Min Read