ಮಹಾಬಲ.ಟಿ ದೆಪ್ಪೆಲಿಮಾರ್
ಮಿಥುನ್ ರಾಜ್ ಕಂಪ
ಮಂಗಳೂರು : ಶ್ರೀ ಜೈಹನುಮಾನ್ ಕ್ರೀಡಾಮಂಡಳಿ (ರಿ) ಕುತ್ತಾರು ಬಟ್ಟೆದಡಿ ಇದರ 31ನೇ ವಾರ್ಷಿಕ ಮಹಾಸಭೆಯು ದಿನಾಂಕ 12-06-2016 ರಂದು ಚಂದ್ರಹಾಸ.ಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2016-17 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಹಾಗೂ ಸವಿುತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಮಹಾಬಲ.ಟಿ ದೆಪ್ಪೆಲಿಮಾರ್, ಕಾರ್ಯದರ್ಶಿಯಾಗಿ ಮಿಥುನ್ ರಾಜ್ ಕಂಪ, ಉಪಾಧ್ಯಕ್ಷರಾಗಿ ಶಿವಾನಂದ ಕುಂಡಲಾಯಿ, ರಾಜೇಶ್ ಬಿಲ್ಲರ ಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಪೃಥ್ವಿರಾಜ್ ಕಬೆಕೋಡಿ, ಕೋಶಾಧಿಕಾರಿಯಾಗಿ ಯೋಗೀಶ್.ಡಿ,, ಕ್ರೀಡಾ ಕಾರ್ಯದರ್ಶಿಯಾಗಿ ದೀಕ್ಷಿತ್ ಕಂಪ, ಶರತ್ ಬಾಕಿಮಾರ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಭಿಷೇಕ್ ಗಾಣದಮನೆ, ಸುಪ್ರೀತ್ ಬಾಕಿಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಇತರ 20 ಸದಸ್ಯರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.


