ಕಾರ್ಕಳ: ಈಕೆ ಐದು ತಿಂಗಳ ಪುಟ್ಟ ಹಸುಳೆ. ಮುದ್ದು ಮುಖದ ಈಕೆ ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು, ಹೆತ್ತವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಕಾರ್ಕಳ ತಾಲೂಕಿನ ಶಿವಪುರ ಗ್ರಾಮದ ಶೇಖರ ಮೂಲ್ಯ – ಸುನೀತ ದಂಪತಿಯ ಪುತ್ರಿ ಮನಸ್ವಿ ಹೃದಯ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರೂ ಸಾಕಷ್ಟು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿ, ಈಗಾಗಲೇ ಹೆಸರು ನೋಂದಾವಣೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದ್ದು, ಬಡತನದ ಬೇಗೆಯಲ್ಲಿರುವ ಶೇಖರ ಮೂಲ್ಯ ಕುಟುಂಬ ಇದನ್ನು ಭರಿಸುವ ಸ್ಥಿತಿಯಲ್ಲಿಲ್ಲ.
ಇನ್ನೂ ಬೆಳೆದು ಸಾಧಿಸಬೇಕಾದ ಪುಟ್ಟ ಬಾಲೆಯ ಚಿಕಿತ್ಸೆಗೆ ತಮ್ಮಿಂದಾದಷ್ಟು ನೆರವಾಗುವಂತೆ ಹೆತ್ತವರು ಕೇಳಿಕೊಂಡಿದ್ದಾರೆ.ಆರ್ಥಿಕ ಸಹಾಯ ಮಾಡಲಿಚ್ಚಿಸುವ ಸಹೃದಯಿ ದಾನಿಗಳು ಮನಸ್ವಿಯ ತಾಯಿ ಸುನೀತಾ ಅವರ ಆತ್ರಾಡಿಯ ವಿಜಯಾ ಬ್ಯಾಂಕ್ S.B ಖಾತೆ ಸಂಖ್ಯೆ : 101101011001564 (IFSC Code:0001011) ಗೆ ಹಣ ಸಂದಾಯ ಮಾಡಬಹುದು.
ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಭೋಜ ಕುಲಾಲ್ ಹಾಗೂ ಗೌರವಾಧ್ಯಕ್ಷ ಹೆಚ್. ಡಿ ಕುಲಾಲ್ ಮನಸ್ವಿಯ ಮನೆಗೆ ಭೇಟಿ ನೀಡಿ 11,000 ರೂ. ನೆರವು ನೀಡಿದರು.