ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ 2015-2017 ರ ಸಾಲಿನ ಪಧಾದಿಕಾರಿಗಳ ಆಯ್ಕೆಯು ಇತ್ತೀಚಿಗೆ ನೆರುಲ್ ನ ಜ್ಯೋತಿ ಕೊ-ಅಪ್ ಕ್ರೆಡಿಟ್ ಸೊಸೈಟಿಯ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಿ. ಶೇಖರ್ ಮೂಲ್ಯ ಇವರನ್ನು ಕಾರ್ಯಾದ್ಯಕ್ಷರಾಗಿ ಆಯ್ಕೆ ಮಾಡಲಾಯಿತು . ಉಪಕಾರ್ಯಾದ್ಯಕ್ಷರಾಗಿ ವಾಸು ಎಸ್ ಬಂಗೇರ, ಕಾರ್ಯದರ್ಶಿಯಾಗಿ ವಿನೋದ್ ಉಜಿರೆ, ಜೊತೆ ಕಾರ್ಯದರ್ಶಿಯಾಗಿ ದಯಾನಂದ್ ಕೆ. ಮೂಲ್ಯ, ಕೋಶಾಧಿಕಾರಿಯಾಗಿ ಹರಿಶ್ಚಂದ್ರ ಮೂಲ್ಯ , ಜೊತೆ ಕೋಶಾಧಿಕಾರಿಯಾಗಿ ಕೃಷ್ಣ ಕುಕ್ಯಾನ್ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾಗಿ ಭಾಸ್ಕರ್ ಎನ್. ಬಂಗೇರ ಆಯ್ಕೆಯಾದರು.
ಪಿ. ಶೇಖರ್ ಮೂಲ್ಯ ಅವರು ಕುಲಾಲ ಸಂಘ ಮುಂಬಯಿಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಸಕ್ರೀಯ ಸದಸ್ಯರಾಗಿ, ಜೊತೆ ಕಾರ್ಯದರ್ಶಿಯಾಗಿ, ಗೌ. ಪ್ರ. ಕಾರ್ಯದರ್ಶಿಯಾಗಿ ಜನಾನುರಾಗಿಯಾಗಿರುವ ಇವರು ಪ್ರಸ್ತುತ ಕುಲಾಲಭವನ ನಿಧಿಸಂಗ್ರಹ ಸಮಿತಿಯ ಕಾರ್ಯದರ್ಶಿಯಾಗಿ ಮಂಗಳೂರಿನ ಕುಲಾಲ ಭವನದ ಯೋಜನೆಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಅಂಗ ಸಂಸ್ಥೆ ಜ್ಯೋತಿ ಕೊ-ಅಪ್ ಕ್ರೆಡಿಟ್ ಸೊಸೈಟಿಯಲ್ಲಿ ಉಪಕಾರ್ಯಾದ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಲಾಲ ಸಂಘ ನವಿಮುಂಬಯಿ : ಕಾರ್ಯಾದ್ಯಕ್ಷರಾಗಿ ಪಿ. ಶೇಖರ್ ಮೂಲ್ಯ ಆಯ್ಕೆ
Kulal news
1 Min Read