ಮಂಗಳೂರು : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡಿ ಆತನ ಬದುಕು ಬೆಳಗಿಸಲು ಸಹೃದಯರು ನೆರವು ನೀಡಬೇಕೆಂದು ಕುಟುಂಬಸ್ತರು ನೆರವಿಗೆ ಮೊರೆ ಇಟ್ಟಿದ್ದಾರೆ.
ಶೃಂಗೇರಿ ಕೊಪ್ಪ ಗ್ರಾಮದ ಬಾಬು ಮೂಲ್ಯ ಅವರ ಮಗ ಮನೋಹರ (32) ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಎರಡೂ ಕಿಡ್ನಿ ವೈಫಲ್ಯದಿಂದ ಸಾಕಷ್ಟು ನೋವು ಅನುಭವಿಸುತ್ತಿರುವ ಮನೋಹರ ಅವರಿಗೆ ತನ್ನ ತಂದೆಯೇ ಕಿಡ್ನಿ ನೀಡಲು ಮುಂದಾಗಿದ್ದಾರೆ. ಆದರೆ ಅವರ ಇತರ ವೈದ್ಯಕೀಯ ಚಿಕಿತ್ಸೆಗೆ ಸುಮಾರು ಎಂಟು ಲಕ್ಷ ಕ್ಕೂ ಅಧಿಕ ಹಣ ವೆಚ್ಚವಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಬದುಕು ಸಾಗಿಸುದೇ ಕಷ್ಟದಾಯಕವಾದ ಪರಿಸ್ಥಿತಿಯಲ್ಲಿ ಈ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಹಣ ಸಂಗ್ರಹಿಸುವುದು ಕನಸಿನ ಮಾತು. ಬೇರೆ ಕಿಡ್ನಿ ಜೋಡಣೆಯಾಗುವವರೆಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕು. ತಿಂಗಳಿಗೆ ಮೂವತ್ತು ಮೂವತ್ತೈದು ಸಾವಿರದವರೆಗೆ ಹಣ ಬೇಕಾಗುತ್ತದೆ. ಮನೋಹರ ಅವರು ಇದೀಗ ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮುಂದಿನ ದಾರಿ ಏನೆಂಬುವುದು ಕುಟುಂಬದ ಚಿಂತೆಗೆ ಕಾರಣವಾಗಿದೆ. ಯುವಕನಿಗೆ ಆರ್ಥಿಕವಾಗಿ ಸಹಾಯವಾಗಲು ಸಂಘ ಸಂಸ್ಥೆಗಳ ನೆರವು ಬೇಕಾಗಿದೆ. ಧನ ಸಹಾಯದ ನಿರೀಕ್ಷೆಯಲ್ಲಿದೆ ಯುವಕನ ಬಡ ಕುಟುಂಬ.
ನೆರವಾಗುವವರು ಮನೋಹರ ಅವರ ಬೆಂಗಳೂರು ಬಿಡದಿಯ ಐಸಿಐಸಿಐ ಉಳಿತಾಯ ಖಾತೆ ಸಂಖ್ಯೆ : 008401523370 (IFSC code :0000084)ಇಲ್ಲಿಗೆ ಧನಸಹಾಯ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 9945373775 ಸಂಪರ್ಕಿಸಲು ವಿನಂತಿ.