ಮುಂಬಯಿ : ತಮ್ಮ ಸಹೋದ್ಯೋಗಿ ಜೊತೆ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಆಕಸ್ಮಾತ್ ಹಿಡಿತ ತಪ್ಪಿ ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಮುಂಬಯಿ ಕುಲಾಲ ಸಂಘದ ಕಾರ್ಯಕರ್ತೆ, ಮೀರಾ-ಭಾಯಂದರ್ ಸರ್ದಾರ್ ವಲ್ಲಭಬಾಯಿ ಪಟೇಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ ಮೂಲ್ಯ(೩೬) ಮೃತ ದುರ್ದೈವಿ.
ಭಾಯಂದರ್ ಪೂರ್ವದ ನಿವಾಸಿಸತೀಶ್ ಮೂಲ್ಯ ಅವರ ಪತ್ನಿಯಾಗಿರುವ ವಿಜಯಲಕ್ಷ್ಮೀ ಅವರು ಏಪ್ರಿಲ್ ಒಂದರಂದು ತಮ್ಮ ಸಹೋದ್ಯೋಗಿ ಶಿಕ್ಷಕಿ ಜೊತೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ, ರಸ್ತೆ ಹಂಪೊಂದರ ಬಳಿ ಹಿಡಿತ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ತಲೆಗೆ ಗಂಭೀರ ಏಟು ತಗುಲಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಎಪ್ರಿಲ್ ೭ರಂದು ನಿಧನರಾದರು. ಮೂಲತಃ ಮಂಗಳೂರಿನ ತೊಕೂರು ನಿವಾಸಿಯಾದ ವಿಜಯಲಕ್ಷ್ಮೀ ಅವರು ತಾಯಿ, ಪತಿ, ಓರ್ವ ಪುತ್ರ ಮತ್ತು ಅಪಾರ ಬಂಧು ವರ್ಗವನ್ನು ಬಿಟ್ಟಗಲಿದ್ದಾರೆ.
ರಸ್ತೆ ಅಪಘಾತದಲ್ಲಿ ಶಿಕ್ಷಕಿ, ಮುಂಬಯಿ ಕುಲಾಲ ಸಂಘದ ಕಾರ್ಯಕರ್ತೆ ಮೃತ್ಯು
Kulal news
1 Min Read