ಪುತ್ತೂರು : ಕರ್ನಾಟಕ ರಿಕ್ಷಾ ಚಾಲಕ ಮಾಲ್ಹಕರ ಸಂಘ ಅನುರಾಗ ವಠಾರ ಬ್ಲಡ್ಬ್ಯಾಂಕ್ ಇದರ ನೂತನ ಅಧ್ಯಕ್ಷರಾಗಿ ಕೆ.ಜಯರಾಮ ಕುಲಾಲ್, ಗೌರವಾಧ್ಯಕ್ಷರಾಗಿ ಸಂಜೀವ ನಾಯಕ್ ಕಲ್ಲೇಗ, ಕಾರ್ಯಾಧ್ಯಕ್ಷರಾಗಿ ಗಿರೀಶ್ ನಾಯ್ಕ ಸೊರಕೆ, ಪ್ರಧಾನ ಕಾರ್ಯದರ್ಶಿಯಾಗಿ ನಾಸೀರ್ ಇಡಬೆಟ್ಟು ಆಯ್ಕೆಯಾಗಿದ್ದಾರೆ.
ಅನುರಾಗ ವಠಾರದಲ್ಲಿ ನಡೆದ ಸಂಘ 9ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಕಾನೂನು ಸಲಹೆಗಾರರಾಗಿ ಬಿ.ಪುರಂದರ ಭಟ್, ಉಪಾಧ್ಯಕ್ಷರುಗಳಾಗಿ ಇಸುಬು ಕೂರ್ನಡ್ಕ, ಮಹಮ್ಮದ್ ಪುತ್ತು, ಕೋಶಾಧಿಕಾರಿಯಾಗಿ ಜಲೀಲ್ ಮರಿಕೆ, ಸಲಹೆಗಾರರಾಗಿ ಅಬ್ದುಲ್ ಜಲೀಲ್, ಸೇಸಪ್ಪ ನಾಯ್ಕ, ಈಶ್ವರ ಸಪಲ್ಯ, ಜೊತೆಕಾರ್ಯದರ್ಶಿಯಾಗಿ ನಾರಾಯಣ ಗೌಡ, ಮೋನಪ್ಪ ಕೈಕಾರ, ಉಮ್ಮರ್ ಸಂಪ್ಯ, ನವೀನ್ ವಿ.ಕೆ, ಮಾಡಾವು ಘಟಕದ ಪ್ರಮುಖರಾಗಿ ಪದ್ಮನಾಭ ಬಲ್ಯಾಯ, ಪೆರ್ಲಂಪಾಡಿ ಘಟಕದ ಪ್ರಮುಖರಾಗಿ ಪಿ.ರಾಮ ಪಾಂಬಾರು ಆಯ್ಕೆಯಾದರು. ಉಳಿದಂತೆ ಹನೀಫ್ ಪಡೀಲ್, ಹಸೈನಾರ್, ಷರೀಫ್, ಸಂಜೀವ ಪೂಜಾರಿ, ರಫೀಕ್ ಬೆದ್ರಾಳ, ಇಬ್ರಾಹಿ ಕರೀಂ, ಉಮೇಶ್, ಶೇಖರ, ಕೆ.ಪಿ ಹಮೀದ್, ಹನೀಫ್ ಕಲ್ಲಗುಡ್ಡೆಯವರನ್ನು ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.