ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರು ತೆಗೆದು ಪತ್ರಿಕೆಗಳನ್ನು ಮರು ಮುದ್ರಿಸಲು ಹೈಕೋರ್ಟ್ನ ವಿಭಾಗೀಯ ಪೀಠ ಬುಧವಾರ ಆದೇಶ ನೀಡಿದ್ದು, ಪುತ್ತೂರು ನಗರ ವಿಹಿಂಪ ಅಧ್ಯಕ್ಷ ನವೀನ್ ಕುಲಾಲ್ ಅವರು ರಿಟ್ ಅರ್ಜಿಗೆ ಜಯ ಸಿಕ್ಕಿದಂತಾಗಿದೆ.
ಆಮಂತ್ರಣ ಪತ್ರಿಕೆಯಲ್ಲಿ ಅನ್ಯ ಮತೀಯ ದ.ಕ. ಜಿಲ್ಲಾಧಿಕಾರಿ ಹೆಸರು ಮುದ್ರಿಸಿರುವುದನ್ನು ಪ್ರಶ್ನಿಸಿ, ಪುತ್ತೂರು ನಗರ ವಿಹಿಂಪ ಅಧ್ಯಕ್ಷ ನವೀನ್ ಕುಲಾಲ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ನ ವಿಭಾಗೀಯ ಪೀಠ ಉತ್ಸವದಲ್ಲಿ ಭಾಗಿಯಾಗಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನಿರ್ಬಂಧವಿಧಿಸಿದೆ.ಅಲ್ಲದೇ ಆಮಂತ್ರಣ ಪತ್ರಿಕೆಯಲ್ಲಿರುವ ಇಬ್ರಾಹಿಂ ಅವರ ಹೆಸರು ತೆಗೆದು ಪತ್ರಿಕೆಗಳನ್ನು ಮರು ಮುದ್ರಿಸಲು ಆದೇಶ ನೀಡಿದೆ.
ದೇವಾಲಯದ ಯಾವುದೇ ಚಟುವಟಿಗೆಗಳಲ್ಲಿ ಡಿಸಿ ಇಬ್ರಾಹಿಂ ಅವರು ಭಾಗಿಯಾಗಕೂಡದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳು ತೀವ್ರವಾಗಿ ಖಂಡಿಸಿ ಆಮಂತ್ರಣ ಪತ್ರಿಕೆಯಿಂದ ಇಬ್ರಾಹಿಂ ಹೆಸರು ತೆಗೆದು ಪುನರ್ ಮುದ್ರಣ ಮಾಡಬೇಕೆಂದು ಆಗ್ರಹಿದ್ದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಬಗ್ಗೆ ತಮಗೆ ವೈಯಕ್ತಿಕ ವಿರೋಧ ಇಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಅಧಿನಿಯಮ 1997ರ 7 (1)ರ ವಿಧಿ ಎ.ಬಿ. ಇಬ್ರಾಹಿಂ ಆಮಂತ್ರಣ ನೀಡುವುದು, ಆಡಳಿತ ನಡೆಸುವುದನ್ನು ನಿಷೇಧಿಸುತ್ತದೆ. ಅವರು ಕಾನೂನು ಉಲ್ಲಂಘಿಸಿದ್ದಾರೆ. ಶಿಷ್ಟಾಚಾರ ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯಿಸುತ್ತದೆ. ದುರುದ್ದೇಶ ಪೂರ್ವಕವಾಗಿ ಹಿಂದೂಗಳ ಧಾರ್ಮಿಕ ನಂಬಿಕೆ, ಆಮಂತ್ರಣ ಪತ್ರಿಕೆಯ ಪಾವಿತ್ರ್ಯ ಕೆಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.
ನವೀನ್ ಕುಲಾಲ್