ಕುಂದಾಪುರ ವಿಧಾನ ಸಭಾ ವ್ಯಾಪ್ತಿಯ ಮೆಟ್ಟಿನ ಹೊಳೆ, ಸಿದ್ದಾಪುರ, ಆಜ್ರಿ, ಶಂಕರನಾರಾಯಣ, ಹಾಲಾಡಿ, ನಡೂರು, ಬಾರಕೂರು, ಬ್ರಹ್ಮಾವರ, ಕೊರ್ಗಿ, ಮೊಳಹಳ್ಳಿ, ವಕ್ವಾಡಿ ಪ್ರದೇಶಗಳು ಕುಲಾಲ ಕುಂಬಾರರು ಪ್ರಬಲವಾಗಿರುವ ಪ್ರದೇಶಗಳು.
ವಕ್ವಾಡಿ ಎಂಬುದು ರಾಜಕೀಯವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕ್ರತಿಕವಾಗಿ,ಉದ್ದಿಮೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಹೆಸರನ್ನು ಪಡೆದ ಸಣ್ಣ ಊರು. ಪುರಾಣ ಪ್ರಸಿದ್ಧ ಕುಂಬಾಸಿಯ ಆನೆಗುಡ್ಡೆ ಹಾಗೂ ಕೋಟೇಶ್ವರದ ಕೋಟಿಲಿಂಗ ದೇವಸ್ಥಾನಗಳ ಮಧ್ಯೆ ಕೋಟ ತೆಕ್ಕಟ್ಟೆಗೆ ತಾಗಿಕೊಂಡು, ಹೂವಿನ ಕೆರೆಯವಾದಿರಾಜ ಮಠದ ಬುಡದಲ್ಲಿರುವ ಸ್ಥಳ. ಕುಂದಾಪುರಕ್ಕೆ ಸಾಮಾಜಿಕ ಹಿನ್ನೆಲೆಯ ಹಿರಿಯ ಶಾಸಕರಾಗಿದ್ದ ವಕ್ವಾಡಿ ಶೀನಪ್ಪ ಶೆಟ್ಟರು ಇದೇ ಊರಿನವರು.
ಇಲ್ಲಿಯ ಕುಲಾಲ ಸಮುದಾಯದ ಪ್ರಾತಿನಿಧ್ಯ ತಿಳಿಯಬೇಕಾದರೆ ಊರ ರಿಕ್ಷಾ ಸ್ಟ್ಯಾಂಡ್ ಗೆ ಹೋದರೆ ಸಾಕು. ಅಲ್ಲಿ ಇರುವ 10 ರಿಕ್ಷಾಗಳಲ್ಲಿ 9 ಕುಲಾಲರದ್ದು. ಹಿರಿಯರು ದೂರದ ಬೆಂಗಳೂರು, ಮುಂಬೈಗಳಲ್ಲಿ ಹೋಟೇಲ್-ಅಂಗಡಿಗಳ ಮಾಲಕರಾಗಿದ್ದರೆ, ಉಳಿದವರು ಓದಿ ಡಾಕ್ಟರ್, ಇಂಜಿನೀಯರ್, ಸರಕಾರಿ ಶಿಕ್ಷಕ ಇತ್ಯಾದಿ ಹುದ್ದೆಯಲ್ಲಿದ್ದಾರೆ. ಹಲವರು ಉದ್ದಿಮೆಮನ್ನೂ ನಡೆಸುತ್ತಿದ್ದಾರೆ.
ರಾಜಕೀಯ ಹಿಂದೂ ಸಂಘಟನೆ, ಯುವಕ ಮಂಡಲ, ದೇವಸ್ಥಾನ, ಹೆಗ್ಗಾರುಬೈಲಿನ ಚಿಕ್ಕು ದೇವರ ಸೇವೆಯಲ್ಲಿ, ಮಹಾಲಿಂಗೇಶ್ವರ, ನಂದಿಕೇಶ್ವರ ದೇವಸ್ಥಾನದಲ್ಲಿ ದುಡಿಯುವವರಲ್ಲಿ ದೊಡ್ಡ ಸಂಖ್ಯೆ ಕುಲಾಲರದ್ದು. ಡಾ.ಎಂ.ವಿ.ಕುಲಾಲರು ಹೇಳುವಂತೆ ಕುಂದಾಪುರ ತಾಲೂಕು ಕುಲಾಲ ಸಂಘವು ಜನಸಂಖ್ಯೆಯ ಆಧಾರದಲ್ಲಿ ನೋಡುವುದಾದರೆ ಹೊಂಬಾಡಿ-ಮಂಡಾಡಿಯಲ್ಲಿ ಆಗುವ ಬದಲು ಮಂಗಳೂರು ಕುಂದಾಪುರ ರಾಜರಸ್ತೆಗೆ ತಾಗಿಕೊಂಡೇ ಇರುವ ವಕ್ವಾಡಿಯಲ್ಲಿಯೇ ಆಗಬೇಕಿತ್ತು. ಆದರೆ ಅದೇ ವಕ್ವಾಡಿಯಲ್ಲಿ ಕುಲಾಲ ಯುವಕರ ಪ್ರಬಲ ಸಂಘಟನೆಯಾಗಿದೆ. ವಕ್ವಾಡಿಯಲ್ಲಿ ಕುಲಾಲ ಯುವಕರು ಸಾಮಾಜಿಕವಾಗಿ ಒಟ್ಟಾಗಿ ನಿಂತು, ಆ ಪರಿಸರದಲ್ಲಿ ಒಂದು ಸಂಚಲನ ಮೂಡಿಸಿದ್ದಾರೆ. ಒಂದು ಉತ್ತಮ ಬೆಳವಣಿಗೆ.
ಡಾ. ಅಣ್ಣಯ್ಯ ಕುಲಾಲ್ ಉಳ್ತೂರು
Posted by :Dinesh Bangera Irvathur/28/03/2016





