ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ) ಮಯ್ಯರಬೈಲು ಇದರ ವತಿಯಿಂದ ಬಿ. ಸಿ ರೋಡಿನ ಪೊಸಳ್ಳಿ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ `ಕುಲಾಲ ಸಮೂದಾಯ ಭವನ’ದ ಉದ್ಘಾಟನೆಯು ಏಪ್ರಿಲ್ ೨೯, ಶುಕ್ರವಾರ ದಂದು ನಡೆಯಲಿದೆ.
ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಂಬಯಿ ಕುಲಾಲ ಸಂಘದ ಗಿರೀಶ್ ಸಾಲ್ಯಾನ್, ನಡುಬೊಟ್ಟು ಕ್ಷೇತ್ರದ ರವಿ ಎನ್, ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್, ಉದ್ಯಮಿ ರಾಜೇಶ್ ನಾಯಕ್, ಎಂ ವಿ ಕುಲಾಲ್, ಸೌಂದರ್ಯ ರಮೇಶ್, ಸುರೇಶ ಕುಲಾಲ್, ನಾಸಿಕ್ ಉದ್ಯಮಿಗಳಾದ ಸಂಜೀವ ಬಂಗೇರ, ರಮಾನಂದ ಬಂಗೇರ, ದಕ ಕುಲಾಲ ಸಂಘದ ರಾಜೇಂದ್ರ ಕುಮಾರ್ ಅಳಪೆ, ಜಿ ಪಂ ಸದಸ್ಯೆ ಕಸ್ತೂರಿ ಪಂಜ, ಪುರಸಭೆ ಸದಸ್ಯರಾದ ಮೋಹನ್, ಭಾಸ್ಕರ ಟೈಲರ್ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಂಟ್ವಾಳ ಕುಲಾಲ ಸಮೂದಾಯ ಭವನ ಏಪ್ರಿಲ್ ೨೯ರಂದು ಲೋಕಾರ್ಪಣೆ
Kulal news
1 Min Read