ಮುಂಬಯಿ : ಮುಂಬಯಿ ಕುಲಾಲ ಸಂಘ ಇದರ ಮುಂದಿನ ಎರಡು ವರ್ಷ ಅವಧಿಗೆ ಅಧ್ಯಕ್ಷರಾಗಿ ಬಿ. ಗಿರೀಶ್ ಸಾಲ್ಯಾನ್ ಪುನರಾಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ಗೌರವಾಧ್ಯಕ್ಷ ಪಿ ಕೆ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ಗಿರೀಶ್ ಸಾಲ್ಯಾನ್ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ದೇವದಾಸ್ ಕುಲಾಲ್ , ಗೌರವ ಪ್ರ. ಕಾರ್ಯದರ್ಶಿಯಾಗಿ ಡೊಂಬಯ ಮೂಲ್ಯ, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ರಘು ಬಿ ಮೂಲ್ಯ, ಕೋಶಾಧಿಕಾರಿಯಾಗಿ ಜಯ ಎಸ್ ಅಂಚನ್, ಚಂದ್ರಹಾಸ ಎಸ್ ಸಾಲ್ಯಾನ್ ಆಯ್ಕೆಗೊಂಡರು. ಸಾಮಾಜಿಕ ಮತ್ತು ಆರ್ಥಿಕ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಎಂ.ಬಂಗೇರ, ಸದಸ್ಯತನ ಸಮಿತಿ ಕಾರ್ಯಾಧ್ಯಕ್ಷರಾಗಿ ಅಣ್ಣಿ ಬಿ ಮೂಲ್ಯ, ವಿದ್ಯಾರ್ಥಿ ಕೌನ್ಸಿಲ್ ಕಾರ್ಯಾಧ್ಯಕ್ಷರಾಗಿ ಹರೀಶ್ ಬಿ ಬಂಗೇರ, ಮೆಡಿಕಲ್ ಎಯ್ಡ್ ಕಾರ್ಯಾಧ್ಯಕ್ಷರಾಗಿ ಉಮಾನಾಥ್ ಕೆ ಮೂಲ್ಯ, ಆಸ್ತಿ ಅಭಿವೃದ್ಧಿ ಕಾರ್ಯಾಧ್ಯಕ್ಷರಾಗಿ ಕೆ ಗೋಪಾಲ್ ಬಂಗೇರ, ಧಾರ್ಮಿಕ-ಆಧ್ಯಾತ್ಮಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಸೀನ ಜಿ ಮೂಲ್ಯ ಬೋರಿವಲಿ ಆಯ್ಕೆಯಾದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಮಮತಾ ಎಸ್ ಗುಜರನ್ , ಸಮಿತಿ ಸದಸ್ಯರಾಗಿ ಸುಮತಿ ಬಂಜನ್, ಆನಂದ್ ಕೆ ಕುಲಾಲ್, ಕರುಣಾಕರ್ ಸಾಲ್ಯಾನ್ , ಶಶಿಕುಮಾರ್ ಕುಲಾಲ್ , ಶಂಕರ್ ವೈ ಮೂಲ್ಯ, ರಘು ಮೂಲ್ಯ, ಶೇಕರ್ ಮೂಲ್ಯ, ಸುರೇಶ ಕುಲಾಲ್, ಅಶ್ವಿನ್ ಬಂಗೇರ, ಆಶಿಶ್ ಕರ್ಕೇರ, ಜಗದೀಶ್ ಬಂಜನ್, ಅಮೂಲ್ಯ ಸಂಪಾದಕೀಯ ಮಂಡಳಿ ಕಾರ್ಯಾಧ್ಯಕ್ಷರಾಗಿ ನಾರಾಯಣ ನೆತ್ರಕೆರೆ ಆಯ್ಕೆಯಾಗಿದ್ದಾರೆ.