ಮಂಗಳೂರು : ಕರಾವಳಿ ಕುಲಾಲ ಯುವ ವೇದಿಕೆ ದ.ಕ ಜಿಲ್ಲಾಧ್ಯಕ್ಷರಾಗಿ ಜಯೇಶ್ ಗೋವಿಂದ್ ಹಾಗೂ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಲಾಲ್ ನಡೂರು ಆಯ್ಕೆಯಾಗಿದ್ದಾರೆ. ಫೆ. ೨೧ರಂದು ನಡೆದ ಕೇಂದ್ರ ಸಮಿತಿಯ ಸಭೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು. ದ,ಕ, ಉಡುಪಿ, ಕಾಸರಗೋಡು ಜಿಲ್ಲೆಯನ್ನೊಳಗೊಂಡ ಕರಾವಳಿ ವಿಭಾಗದ ವಿಭಾಗೀಯ ಅಧ್ಯಕ್ಷರಾಗಿ ಮೋಹಿತ್ ಕುಲಾಲ್ ಬಿಜೈ, ರಾಜ್ಯ ಕುಂಬಾರ ಸಂಘ ಕರಾವಳಿ ವಿಭಾಗೀಯ ಅಧ್ಯಕ್ಷರಾಗಿ ಮಹಾಬಲ ಕುಲಾಲ್ ನೀರುಮಾರ್ಗ, ದ. ಕಕ್ಕೆ ಜಯರಾಜ್ ಪ್ರಕಾಶ್.ಉಡುಪಿಗೆ ನ್ಯಾಯವಾದಿ ಸುನೀಲ್ ಕುಲಾಲ್ ಕಾಪು ಇವರನ್ನು ಸರ್ವಾನುಮತದಿಂದ ಆರಿಸಲಾಯಿತು. ಇವರಿಗೆ ಉಳಿದ ಪದಾಧಿಕಾರಿಗಳ ಹಾಗೂ ವಿಧಾನ ಸಭಾ ಪದಾಧಿಕಾರಿಗಳ ಆಯ್ಕೆ ಮಾಡಲು ಸಂಘ ಸಂಸ್ಥೆಗಳೂಡನೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಲಾಯಿತು.
ಕರಾವಳಿ ಕುಲಾಲ ಯುವವೇದಿಕೆ ದ.ಕ ಜಿಲ್ಲಾಧ್ಯಕ್ಷರಾಗಿ ಜಯೇಶ್ ಗೋವಿಂದ್, ಉಡುಪಿಗೆ ಸತೀಶ್ ಕುಲಾಲ್
Kulal news
1 Min Read