ಕುಲಾಲ ಸಂಘ ನವಿಮುಂಬಯಿ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
ಮುಂಬಯಿ : ಕುಲಾಲ ಸಂಘ ಉಪ ಸಮಿತಿ ನವಿಮುಂಬಯಿ ಮಹಿಳಾ ಘಟಕದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮವು ಇತ್ತೀಚೆಗೆ ವಾಶಿಯ ಗುರವ್ ಸಭಾಗ್ರಹದಲ್ಲಿ ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಲಾಲ ಸಂಘ ಮುಂಬಯಿಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್ ಮತ್ತು ಉಪ ಕಾರ್ಯಾಧ್ಯಕ್ಷೆ ಸುಚೇತ ಕುಲಾಲ್, ವಿಶೇಷ ಅತಿಥಿಯಾಗಿ ಪ್ರಭಾ ಆರ್. ದೇವಾಡಿಗ ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಭಜನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕೋಶಾಧಿಕಾರಿ ಜಯ ಎಸ್.ಅಂಚನ್ ಸ್ಥಳೀಯ ಕಾರ್ಯಾಧ್ಯಕ್ಷ ಪಿ. ಶೇಖರ್ ಮೂಲ್ಯ ಮತ್ತು ಸ್ಥಳೀಯ ಕಾರ್ಯದರ್ಶಿ ವಿನೋದ್ ಕುಮಾರ್ ಉಜಿರೆ ವಿಶೇಶ ಅತಿಥಿ ಪ್ರಭಾ ಆರ್. ದೇವಾಡಿಗ ಇವರ ಉಪಸ್ಥಿತಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತ ಹಾಗೂ ನವಿ ಮುಂಬಯಿ ಮಹಿಳಾ ವಿಭಾಗದ ಭಜನೆ ಮಂಡಳಿಯ ಅರ್ಚಕ ನಾರಾಯಣ ಬಂಗೇರ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಬಂಗೇರವರು ಅರಶಿನ ಕುಂಕುಮವೆನ್ನುವುದು ಸುಮಂಗಳೆಯರ ಪ್ರತೀಕ ಮಹಿಳೆಯರು ಅಚ್ಚುಕಾಟ್ಟಾಗಿ ಆಚರಿಸಿದರೆ ಅವರಿಗೆ ದೇವರ ಅನುಗ್ರಹವು ಲಭಿಸುತ್ತದೆ. ಭಜನೆಯು ದೇವರನ್ನು ಸ್ತುತಿಸುವ ಸುಲಭವಾದ ದಾರಿ ಭಜನೆ ಇದ್ದಲ್ಲಿ ವಿಭಜನೆ ಇಲ್ಲ, ಭಜನೆಗೆ ಒಲಿಯದ ದೇವರಿಲ್ಲ ನಾನು ಇರಲಿ ಇಲ್ಲದಿರಲಿ ಭಜನೆ ಮಾತ್ರ ಅನಂತ ಕಾಲದವರೆಗೆ ನಿರಂತರವಾಗಿ ಸಾಗುತಿರಲಿ ಎಂದು ಸುಮಂಗಳೆಯರನ್ನು ಆರ್ಶಿರ್ವದಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಬಿ. ಸಾಲ್ಯಾನ್ ನವರು ಸ್ತ್ರೀ ಶಕ್ತಿಯ ಒಗ್ಗಟ್ಟು ಸಂಘಕ್ಕೆ ಒದಗಿದ ಒಂದು ದೊಡ್ಡ ಶಕ್ತಿ ತಾವೆಲ್ಲರು ಮನಸ್ಸುಮಾಡಿದರೆ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕುಲಾಲ ಭವನ ಅತಿ ಶೀಘ್ರದಲ್ಲಿ ಪೂರ್ಣಗೊಳ್ಳುವುದರಲ್ಲಿ ಸಂದೇಹವಿಲ್ಲ ತಮ್ಮೆಲ್ಲ ತುಂಬು ಹೃದಯದ ಸಹಕಾರವನ್ನು ಬಯಸುತ್ತೇನೆ ಎಂದರು.
ಅನಂತರ ಜರಗಿದ ಅರಶಿನ ಕುಂಕುಮದ ಸಭಾಕಾರ್ಯಕ್ರಮದಲ್ಲಿ ಲತಾ ಆರ್.ಮೂಲ್ಯರವರು ಬಂದ ಸಭಿಕರನ್ನು ಹಾಗೂ ನೆಂಟರನ್ನು ಸ್ವಾಗತಿಸಿದರು. ಶೋಭ ಎನ್.ಮೂಲ್ಯರವರು ಸಭಾಧ್ಯಕ್ಷೆ ಕುಲಾಲ ಸಂಘ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಮಮತಾ ಎಸ್.ಗುಜರನ್, ಸ್ಥಳೀಯ ಸಮಿತಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪ್ರೇಮಾ ಎಲ್. ಮೂಲ್ಯ, ವಿಶೇಷ ಅತಿಥಿ ದೇವಾಡಿಗ ಸಂಘದ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾ ಅರ್. ದೇವಾಡಿಗ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಲತಾ ಅರ್. ಮೂಲ್ಯ ಸ್ಥಳೀಯ ಸಮಿತಿಯ ಸದಸ್ಯೆ ಡಾ.ಸುಚಿತ್ರಾ ಎಚ್. ಸಾಲ್ಯಾನ್, ಕೋಶಾಧಿಕಾರಿ ಆಶಾ ಎಸ್. ಮೂಲ್ಯ ಇವರೆಲ್ಲರನ್ನು ವೇದಿಕೆಗೆ ಸ್ವಾಗತಿಸಿದರು.
ಬೇಬಿ ವಿ. ಬಂಗೇರ, ಬಳಗದವರಿಂದ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಳೀಯ ಸಮಿತಿಯ ಸದಸ್ಯೆ ಮಾಲತಿ ಜೆ. ಅಂಚನ್ ನವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಸ್ಥಳೀಯ ಕಾರ್ಯಾಧ್ಯಕ್ಷೆ ಪ್ರೇಮಾ ಎಲ್. ಮೂಲ್ಯರವರು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ತನ್ನನು ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯನ್ನಾಗಿ ಮಾಡಿದ್ದಕ್ಕೆ ಧನ್ಯವಾದವನ್ನು ಅರ್ಪಿಸುತ್ತಾ ಅರಶಿನ ಕುಂಕುಮದ ಮಹತ್ವದ ಬಗ್ಗೆ ವಿವರಿಸುತ್ತಾ, ನಮ್ಮ ಆಚಾರ ವಿಚಾರ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರವನ್ನು ಮನವರಿಕೆ ಮಾಡಿಕೊಟ್ಟರು. ಮುಖ್ಯ ಅತಿಥಿ ಪ್ರಭಾ ಅರ್. ದೇವಾಡಿಗ ಮಾತನಾಡುತ್ತಾ ಕುಲಾಲ ಸಂಘ ನನ್ನನ್ನು ಈ ಕಾರ್ಯಕ್ರಮಕ್ಕೆ ಆಮಂತ್ರಿಸಿ ಸತ್ಕರಿಸಿದ್ದು ನನಗೆ ಬಹಳ ಸಂತೊಷವನ್ನುಂಟು ಮಾಡಿದೆ. ಕುಲಾಲ ಸುಮಂಗಳೆಯರು ಇಷ್ಟು ಹೆಚ್ಚು ಸಂಖ್ಯೆಯಲ್ಲಿ ನೆರೆದದ್ದು ನೋಡಿದರೆ ನಿಮ್ಮ ಒಗ್ಗಟನ್ನು ಪ್ರತಿಬಿಂಬಿಸುತ್ತದೆ. ಮಹಿಳೆಯರು ಹಿಂದುಳಿಯದೆ ಬಿಡುವಿನ ಸಮಯದ್ದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿದರೆ ಮಹಿಳೆಯರ ಏಳಿಗೆಗೆ ಸಹಾಯವಾಗುತ್ತದೆ. ನಿಮ್ಮಿಂದ ಮುಂದೆಯು ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿಯ ಶಶಿಕಲಾ ಮೂಲ್ಯ, ಉಷಾ ಆರ್. ಮೂಲ್ಯ, ಮಲ್ಲಿಕಾ ಡಿ. ಕುಲಾಲ್, ಮಾಲತಿ ಜೆ. ಅಂಚನ್, ಜಾನಕಿ ಎಸ್. ಮೂಲ್ಯ, ಯಶೋದ ಆರ್. ಮೂಲ್ಯ, ಪೂರ್ಣಿಮಾ ಯು. ಕುಲಾಲ್, ಚಂದ್ರಕಲಾ ಕುಲಾಲ್, ಸರೋಜಿನಿ ಎಸ್. ಕುಲಾಲ್, ಪದ್ಮಾವತಿ ಮೂಲ್ಯ, ಸುಚೇತ ವಿ. ಮೂಲ್ಯ, ಮಮತಾ ಎಸ್. ಕುಲಾಲ್, ಸುಮತಿ ಬಂಜನ್, ಮತ್ತು ಅಪಾರ ಸಂಖ್ಯೆಯಲ್ಲಿ ಸುಮಂಗಲಿಯರು ಪಾಲ್ಗೊಂಡಿದ್ದರು.
ಸಭಾಕಾರ್ಯಕ್ರಮದ ನಂತರ ಮಹಿಳೆಯರು ಅರಶಿನ ಕುಂಕುಮವನ್ನು ವಿನಿಮಯ ಮಾಡಿ ಕೊಂಡರು, ಹಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಂಗಳೆಯರಿಗೆಲ್ಲ ಉಡುಗೊರೆಯನ್ನು ಕೊಟ್ಟು ಸತ್ಕರಿಸಲಾಯಿತು. ಇದರ ಸಂಪೂರ್ಣ ಖರ್ಚವೆಚ್ಚವನ್ನು ಉಪಸಮಿತಿಯ ಮಹಿಳಾ ಕಾರ್ಯಕರ್ತರು ವಹಿಸಿಕೊಂಡಿದ್ದರು. ಲಘು ಉಪಾಹಾರದ ನಂತರ ವಿವಿಧ ಮನೋರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.