
ಮಂಗಳೂರು : ಇತ್ತೀಚೆಗೆ ಮಂಗಳೂರಿನ ಯು ಎಸ್ ಮಲ್ಯ ಇಂಡೋರ್ ಸ್ಟೇಡಿಯಂನಲ್ಲಿ ಜರುಗಿದ ವೆಸ್ಟರ್ನ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶಕ್ತಿನಗರದ ಮಾ. ಸೃಜನ್ ಪ್ರಸಾದ್ ಅವರು ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದಿದ್ದಾರೆ. ಇವರು ಮಂಗಳೂರಿನ ಕಮಲಾಕ್ಷ ಅವರ ಶಿಷ್ಯರಾಗಿದ್ದು, ವಕೀಲ ರಾಮ್ ಪ್ರಸಾದ್ ಅವರ ಸುಪುತ್ರ.