ಕೇರಳ ಕುಂಬಾರರ ಸಂಘಟನೆ ಹಾಗೂ ಸಾಧನೆ ರಾಷ್ಟ್ರದ ಕುಂಬಾರರಿಗೆ ಮಾದರಿ : ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು
ಕಣ್ಣೂರು : ಕೇರಳ ಕುಂಬಾರರ ಸಂಘಟನೆ ಹಾಗೂ ಸಾಧನೆ ರಾಷ್ಟ್ರದ ಕುಂಬಾರರಿಗೆ ಮಾದರಿ ಎಂದು ಕುಲಾಲ ಸಮಾಜದ ಮುಖಂಡ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಕೇರಳ ಮಣ್ಣ್ ಪಾತ್ರ ನಿರ್ಮಾಣ ಸಮುದಾಯ ಸಭಾದ ಕಣ್ಣೂರು ವಿಭಾಗೀಯ ಮಹಿಳಾ ಸಭೆಯ ಸಮ್ಮೇಳನದಲ್ಲಿ ಪ್ರಧಾನ ಭಾಷಣಗಾರರಾಗಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಕುಂಬಾರರಿಗೆ ಶೇಕಡಾ 1% ಮೀಸಲಾತಿಗಾಗಿ ಹೋರಾಡಿ ಅದನ್ನು ಪಡೆದು ಈ ಬಾರಿ ಅದೇ ಮೀಸಲಾತಿಯಲ್ಲಿ 50 ಮಂದಿ ಕುಂಬಾರ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗುವಂತೆ ಮಾಡಿದ ಕೇರಳ ಕುಂಬಾರ ಸಂಘ ರಾಷ್ಟ್ರದ ಇತರ ಕುಂಬಾರ ಸಂಘಗಳಿಗೆ ಮಾದರಿ ಎಂದರು.
ಮುಂದುರಿದು ಮಾತನಾಡಿದ ಅವರು, ಕುಂಬಾರ ಸಂಘಗಳು, ದೇವಸ್ಥಾನ, ಬ್ರಹ್ಮ ಕಲಶ, ನಾಗಮಂಡಲ, ಬ್ಯಾಂಕ್, ವ್ಯವಹಾರಗಳತ್ತ ಕೊಡುವಷ್ಟೇ ಆದ್ಯತೆಯನ್ನು ಜನರಿಗೆ ಶಿಕ್ಷಣ, ಉದ್ಯೋಗ, ಕುಂಬಾರಿಕೆಯ ಅಭಿವೃದ್ಧಿಯತ್ತಲೂ ಕೊಡಬೇಕಾಗಿದೆ. ಇದು ಸಂಘಗಳು ಮಾಡಲೇ ಬೇಕಾದ ಮೂಲಕರ್ತವ್ಯಗಳು. ನಾವು ಇದನ್ನು ಮಾಡುವುದು ಬಿಟ್ಟು ಇನ್ನಾವುದನ್ನೋ ಮಾಡಲು ಹೊರಡಬಾರದು. ಕೇರಳ ಕುಂಬಾರರಿಗೆ ಶಿಕ್ಷಣದ ಬಗೆಗಿರುವ ತುಡಿತದಿಂದಾಗಿ ಎಲ್ಲಾ ನಾಯಕರ ಸಂಘಟಿತ ಹೋರಾಟದಿಂದಾಗಿ ಕುಂಬಾರಿಗೆ ಪ್ರತ್ಯೇಕ ಮೀಸಲಾತಿ ದೊರೆಯಿತು. ಅದೇ ಮೀಸಲಾತಿಯನ್ನು ಉದ್ಯೋಗದಲ್ಲೂ ನೀಡುವಂತೆ ಹೋರಾಟ ನೆಡೆಯಿಸುತ್ತಿರುವೂದು ಶ್ಲಾಘನೀಯ. ಎಲ್ಲಾ ಸಂಘಗಳೂ ಇದನ್ನು ಮಾದರಿಯಾಗಿ ಅನುಸರಿಸಬೇಕೆಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಖಿಲ ಭಾರತ ಪ್ರಜಾಪತಿ ಕುಂಭಕಾರ್ ಮಹಾಸಂಘದ ಮಹಿಳಾ ಯುವ ಘಟಕದ ಅಧ್ಯಕ್ಷೆ ಮನಿಷಾ ಮಹೇಶ್ ಶೆಟ್ಕರ್ ಭಾಗವಹಿಸಿದ್ದರು. ಕೇರಳ ಮಣ್ಣ್ ಪಾತ್ರ ನಿರ್ಮಾಣ ಸಮುದಾಯ ಸಭಾದ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಡಾ. ಪ್ರಮೀಳಾ ಮಹೇಶ್, ಕಾರ್ಯದರ್ಶಿ ರಾಜೇಶ್ ಪಾಲ೦ಘಟ್, ಜಿಲ್ಲಾಧ್ಯಕ್ಷೆ ಟಿ.ವಿ ಪದ್ಮಿನಿ, ಸಂಘಟನಾ ಸಮಿತಿಯ ಲಲಿತಾ ಕೆ ಮುಂತಾದವರು ಉಪಸ್ಥಿತರಿದ್ದರು.
ಕೇರಳ ರಾಜ್ಯ ಕಣ್ಣೂರು ವಿಭಾಗೀಯ ಮಹಿಳಾ ಸಮಾವೇಶಕ್ಕೂ ಮುನ್ನ ತಳಿಪರಂಭ ನಗರದ ಕುಂಬಾರ ಸಮುದಾಯದ ಭದ್ರಕೋಟೆಯ ವಾರ್ಡ್ ಗಳಾದ ಕೃಷ್ಣ ದೇವಸ್ಥಾನ,
ರಾಜರಾಜೇಶ್ವರಿ ದೇವಸ್ಥಾನ ಹಾಗೂ ದೇವಿ ದೇವಸ್ಥಾನಗಳ ಭಾಗಗಳಿಂದ ಹರಿದು ಬಂದ ಸಾವಿರಾರು ಮಹಿಳೆಯರು ನೀಲಿ ಬಾವುಟ ಹಿಡಿದು ನಗರದ ರಾಜಹೆದ್ದಾರಿಯನ್ನು ಮುತ್ತಿಬಿಟ್ಟರು. ಇಡೀ ತಳಿಪರಂಭ ನಗರ ನಿಬ್ಬೆರಗಾಗಿ ನೋಡುವಂತೆ ಘೋಷಣೆಗಳನ್ನು ಕೂಗಿದರು. ಕೇರಳ ರಾಜ್ಯ ಜಿಲ್ಲೆ ಯ ವವಿವಿಧ ಮಹಿಳಾ ನಾಯಕರ ಜೊತೆ ಕೇರಳ ಕರ್ನಾಟಕ ಗೋವಾ ತಮಿಳು ನಾಡಿನ ಪ್ರಜಾಪತಿ ಕುಂಬಾರನಾಯಕರು ಮೆರವಣಿಗೆಯಲ್ಲಿ ಸಾಗಿ ಬಂದರು.