2008ರಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಕೂಗು ತೀವ್ರವಾದಾಗ, ಹಿಂದುಳಿದ ವರ್ಗ ಜಾತಿಯ ಸಂಘಟನೆಗಳು ರಾಜ್ಯಮಟ್ಟದಲ್ಲಿ ಸರಕಾರಗಳ ಗಮನ ಸೆಳೆಯಲು ಸಂಘಟನೆ ಸಮ್ಮೇಳನಗಳ ಮೂಲಕ ಸುದ್ದಿ ಮಾಡಿದವು. ಇದೇ ಸಮಯದಲ್ಲಿ ಕುಲಾಲ, ಕುಂಬಾರ, ಗುನಗ, ಮೂಲ್ಯ, ಹಾಂಡ, ಕುಂಬಾರಸೆಟ್ಟಿ, ಚಕ್ರಸಾಲಿ, ಪ್ರಜಾಪತಿ ಎಂಬಿತ್ಯಾದಿ ಹೆಸರಲ್ಲಿ ಹರಿದು ಹಂಚಿ ಹೋಗಿರುವ ಸುಮಾರು 25ಲಕ್ಷ ಕುಂಬಾರರನ್ನು ಒಗ್ಗೂಡಿಸಲು ಕರ್ನಾಟಕ ರಾಜ್ಯಕುಂಬಾರ ಸಂಘದ ಮೂಲಕ ಪ್ರಯತ್ನಿಸಲಾಯಿತು. ಆಗಲೇ ದೆಹಲಿಯ ಪ್ರಜಾಪತಿ ಕುಂಭಕಾರ್ ಮಹಾಸಂಘದ ರಾಜ್ಯ ಯುವಘಟಕದ ಜವಾಬ್ದಾರಿಯು ನನ್ನ ಮೇಲಿರುವುದರಿಂದ. ರಾಜ್ಯವ್ಯಾಪಿ ಕುಲಾಲ-ಕುಂಬಾರ ಯುವಕರನ್ನ ಸಂಘಟಿಸುವ ಮತ್ತೂಂದು ಹೊರೆಯನ್ನ ಕುಂಬಾರ ಸಂಘದ ರಾಜ್ಯಕಾರ್ಯಾದ್ಯಕ್ಷ ಎಂಬ ನೆಲೆಯಲ್ಲಿ ನೀಡಲಾಯಿತು.
ಹಳೇ ಮೈಸೂರು, ಬೆಂಗಳೂರು, ಹೈ.ಕ., ಉತ್ತರ ಕರ್ನಾಟಕಗಳಲ್ಲಿ ಸಂಘಗಳು ಇದ್ದರೂ ಸಹಾ ಕರಾವಳಿಯಲ್ಲಿ ಇದ್ದಷ್ಟು ಸಂಖ್ಯೆಯಲ್ಲಿ ಇರಲಿಲ್ಲ. ಆದರೆ ಒಬ್ಬರು ಮತ್ತೊಬ್ಬರನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಬೆಕ್ಕಿನ ಬಿಡಾರ ಬೇರೆ ಎಂಬಂತೆ ನೂರಾರು ಸಂಘಟನೆಗಳು, ಸಾವಿರಾರು ನಾಯಕರು ಮೇಟಿ ಇಲ್ಲದೆ ದುಡಿಯುತ್ತಿದ್ದರು. ಆದರೆ ಯಾರ ಕೂಗೂ ಸರಕಾರವನ್ನು ಮುಟ್ಟಿಸುವಲ್ಲಿ ಸೋತಿದ್ದೇವೆ.
ಆಗ ಯುವಕರನ್ನ ಗುರಿಯಾಗಿಸಿಕೊಂಡು ಅವರನ್ನು ಸಂಘಟಿಸಿ ಕುಂಬಾರ ಸಮುದಾಯಕ್ಕೆ ಶಕ್ತಿ ಕೊಡುವ ಬಗ್ಗೆ ಚಿಂತನೆ ಮಾಡಿ ಕುಂಬಾರರ ಮಹಾಸಂಘದ ಆಶ್ರಯದಲ್ಲಿ ಕುಂಬಾರರ ಯುವವೇದಿಕೆಯನ್ನು ರಚಿಸಲಾಯಿತು. ಮಂಡ್ಯ ನಾಗರಾಜ್ ಅವರ ನಾಯಕತ್ವದಲ್ಲಿ ರಾಜ್ಯ ಮಟ್ಟದಲ್ಲಿ ಯುವಕರನ್ನು ಸಂಘಟಿಸಲಾಯಿತು. ಆದರೆ ಕರಾವಳಿಯನ್ನು ಹೊರತು ಪಡಿಸಿ ಬೇರೆ ಕಡೆ ನಮಗೆ ಹಿರಿಯರನ್ನೇ ಸಂಘಟಿಸಲು ಕಷ್ಟವಾದಾಗ, ಯುವಕರನ್ನು ತಲುಪಲು ಸಾಧ್ಯವಾಗಲಿಲ್ಲ. ಯುವವೇದಿಕೆಯ ಜವಾಬ್ದಾರಿಯು ನನ್ನ ಮೇಲಿದ್ದರಿಂದ ಕರಾವಳಿಯನ್ನ ಮಾದರಿಯನ್ನಾಗಿ ಇಟ್ಟುಕೊಂಡು ಯುವಕರನ್ನು ಸಂಘಟಿಸುವ ಕಾರ್ಯವನ್ನು ಕೈಗೆತ್ತಿಕೊಂಡು ಕರಾವಳಿಯ ಅನಿಲ್ ಕೆಂಬಾರ್ ರವರನ್ನು ರಾಜ್ಯ ಯುವವೇದಿಕೆಯ ಅದ್ಯಕ್ಷರನ್ನಾಗಿಸಿಕೊಂಡು ಕರಾವಳಿಯಲ್ಲಿ ಹೋರಾಟಕ್ಕೆ ಅಡಿಇಟ್ಟೆವು.
ಕರಾವಳಿ ವಿಭಾಗದ ಆಗಿನ ಅಧ್ಯಕ್ಷ ಸತೀಶ್ ಕುಲಾಲ್ ಉಡುಪಿ, ದ.ಕ ಅಧ್ಯಕ್ಷ ಸುಜೀರ್ ಕುಡುಪು, ಉಡುಪಿಯ ಅಧ್ಯಕ್ಷ ರಾಜುಕುಲಾಲ್ , ಹರೀಶ್ ಕಾರಿಂಜ , ಜನಾರ್ಧನ್ ಪುತ್ತೂರು ಮುಂತಾದವರು ನಮ್ಮ ಬೆನ್ನಿಗೆ ನಿಂತರು. ಡಾ.ಎಂ.ವಿ.ಕುಲಾಲ್ , ದಿ. ಮಹಾಬಲ ಹಾಂಡ. ಎಂ.ಆರ್.ನಾರಾಯಣ. ಪದ್ಮಕುಮಾರ್ , ಮಹಾಬಲ ಕುಲಾಲ್, ರಾಮಣ್ಣ ಪೆರ್ಡೂರು, .ಜಯರಾಜ್ ಪ್ರಕಾಶ್ನಿ, ರಂಜನ್ ಸಳ್ವಾಡಿ ಅವರವರ ಸಂಘಗಳ ಮೂಲಕ ನಮ್ಮ ಬೆನ್ನುತಟ್ಟಿದರು. ಆದರೂ ಹಲವರು ನಮ್ಮ ಕೆಲಸದ ಬಗ್ಗೆ ಮೂಗು ಮುರಿದರು. ನೇರಾನೇರ ವಿರೋಧಿಸದಿದ್ದರೂ ಪರೋಕ್ಷವಾಗಿ ಕಾಲೆಳೆಯಲು ಪ್ರಯತ್ನಿಸಿದರು.
ವೀರನಾರಾಯಣ ದೇವಸ್ಥಾನ, ದೇವಿದೇವಸ್ಥಾನ ಹಾಗೂ ಮಂಗಳಾದೇವಿ ಕುಲಾಲ ಭವನಗಳಲ್ಲಿ ನಾವು ಪಣತೊಟ್ಟು ಮಾಡಿದ ಸಮ್ಮೇಳನಗಳಿಂದಾಗಿ ತೇಜಸ್ವೀರಾಜ್, ಅನಿಲ್ ದಾಸ್ , ಶಂಕರ ಕುಲಾಲ್ , ಜಯೇಶ್ ಗೋವಿಂದ, ದಿ ನಕರ್, ದೇವಿಪ್ರಸಾದ್. , ಅಶೋಕ್ ಕುಲಾಲ್, ಗಣೇಶ್ ಕುಳಾಯಿ ಜನಾರ್ಧನ್ ಕುಳಾಯಿ, ಗಣೇಶ್ ಕಾಪಿಕಾಡು, ಪ್ರವೀಣ್ ಬಸ್ತಿ, ಆನಂದ ಬಂಟ್ವಾಳ, ಮಯೂರ್ , ಹರೀಶ್ ಕುಳಾಯಿ, ಸದಾನಂದ ನಾವರ, ಜೀವನ್ ಕುಮಾರ್, ಸತೀಶ್ ಕುಲಾಲ್ ನಡೂರು, ಬಸವರಾಜ್ ಬ್ರಹ್ಮಾವರ, ಸಚ್ಚಿದಾನಂದ ಪುತ್ತೂರು, ಶಿವಕುಮಾರ್ ಚೌಡಶೆಟ್ಟಿ, ಗಂಗಾಧರ್ ಬಂಜನ್, ಭೋಜಅಡ್ಯಾರ್, ಶ್ರೀದರ್ ತೋಕೂರು, ಮಂಜುನಾಥ ಕುಲಾಲ್ ಸಾಲಿಗ್ರಾಮ, ಭೋಜ ಕುಲಾಲ್ ರಟ್ಟಾಡಿ, ಲಕ್ಷ್ಮಣ ಕುಲಾಲ್ ಅಗ್ರಬೈಲು, ರಾಜೇಂದ್ರ ಕುಲಾಲ್., ರಾಜೇಂದ್ರ ಕುಮಾರ್ , ರವಿ ಕೆಪಿಟಿ, ಅರವಿಂದ ಮಣ್ಣಗುಡ್ಡೆ, ಲಕ್ಷ್ಮಣ್ ಕುಂದರ್, ಸದಾನಂದ ಬಿಕರ್ಣಕಟ್ಟೆ, ಗೋಪಾಲ್ ಕುಲಾಲ್, ದಾಮೋದರ್, ಪುಷ್ಪಸದಾನಂದ, ಸುಧಾಕರ್ ಸುರತ್ಕಲ್, ದಯಾನಂದ ಅಡ್ಯಾರ್, ನಾರಾಯಣ ಬಂಗೇರ, ಆಶು ಸಾಲ್ಯಾನ್ ಪಂಪ್ ವೆಲ್, ಸದಾಶಿವ ಬಂಗೇರ, ಮಚ್ಚೇಂದ್ರನಾಥ್, ರಾಮ ಅಲ್ಲಿಪಾದೆ ಅಲ್ಲದೆ ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಮೂಡಬಿದಿರೆ, ಮಂಗಳೂರು ನಗರ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯದ 600ಕ್ಕೂ ಅಧಿಕ ಸ್ವಯುಂ ಸೇವಕ ಯುವಕರ ದಂಡೇ ನಮ್ಮ ಜೊತೆ ಕೈಜೋಡಿಸಿದರು.
ಅಂದಿನಿಂದ ಕರಾವಳಿ ಕುಲಾಲ ಯುವವೇದಿಕೆ ಹಿಂತಿರುಗಿ ನೋಡಲೇ ಇಲ್ಲ. ಸಾವು, ನೋವು, ಕಾಯಿಲೆ-ಕಸಾಲೆ, ಕ್ಯಾನ್ಸರ್, ವಿದ್ಯಾಭ್ಯಾಸ, ಮನೆ-ಮಠ ,ಮಂದಿರ ಹೋರಾಟಗಳಲ್ಲಿ ಯುವವೇದಿಕೆಯು ಜಿಲ್ಲೆ ತಾಲೂಕು ಹೋಬಳಿಗಳಲ್ಲಿ ತೊಡಗಿಸಿಕೊಂಡು ಮನೆಮಾತಾಯಿತು. ಯುವವೇದಿಕೆಯು ಈಗಾಗಲೇ ಇರುವ ಸಂಘಗಳಿಗೆ ಮಗ್ಗುಲಮುಳ್ಳಾಗುತ್ತದೆ ಅದಕ್ಕೆ ಬೆಂಬಲ ಕೊಡಬೇಡಿ ಅಂದ ಮಿತ್ರರೂ ಯುವವೇದಿಕೆಯ ಬೆನ್ನುತಟ್ಟಿ ಸಹಾಯ-ಸಹಕಾರ ಪಡೆದುಕೊಳ್ಳ ತೊಡಗಿದರು. ಕಟ್ಟಡ ಇಲ್ಲದ, ಲೆಟರ್ ಹೆಡ್ ಇಲ್ಲದ, ಮೀಟಿಂಗ್ -ಕೋರಂ ಇಲ್ಲದೆ , ರಸೀದಿ ಕಲೆಕ್ಷನ್ ಇಲ್ಲದೆ ಸಾವು-ನೋವು, ಶೋಷಣೆ, ದೌರ್ಜನ್ಯ ಇರುವಲ್ಲಿಗೆ ಧಾವಿಸಿ ಸ್ವಯಂಸೇವೆ ಮಾಡುವ ಈ ಯುವಕರ ದಂಡು ಅವಿಭಜಿತ ದಕ ಜಿಲ್ಲೆಯ ಆಯಾಯ ವಿಧಾನ ಸಭಾ ಮಟ್ಟದ ಅಲ್ಲಿಯ ಸಂಘಗಳ ಬೆನ್ನೆಲುಬಾಗಿ ನಿಂತು ಫಲಾಫೇಕ್ಷೆ ಇಲ್ಲದೆ ದುಡಿಯುತ್ತಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಹೋರಾಟಗಳಲ್ಲಿ ಮುನ್ನುಗ್ಗಿ ದುಡಿಯುತ್ತಿದ್ದಾರೆ. ಶ್ರೀದೇವಿ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ಭೂಕೈಲಾಸ ನಡುಬೊಟ್ಟು, ಮಾಣಿಲ ಕ್ಷೇತ್ರ ಹಾಗೂ ಇನ್ನಿತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಜಾತಿ ,ಧರ್ಮದ ಎಲ್ಲೆಯನ್ನು ಮೀರಿ ದುಡಿಯುತ್ತಿದ್ದಾರೆ. ಯಾರೂ ಹೈಕಮಾಂಡ್ ಇಲ್ಲ, ಎಲ್ಲರೂ ದುಡಿಯುವವರು, ಎಲ್ಲರೂ ನಾಯಕರು, ಸಾಮೂಹಿಕ ನಾಯಕತ್ವದ ಪ್ರತಿಪಾದನೆ.
ಕುಂಭಕಲಾ ನಿಗಮ, ಕುಂಬಾರ ಭವನ, ಸರ್ವಜ್ಞ ಜಯಂತಿಗಳನ್ನು ಕುಂಬಾರ ಸಮುದಾಯಕ್ಕೆ ತರುವ ಹೋರಾಟದಲ್ಲಿ ಮುಂಚೂಣಿಯಲ್ಲಿ ಕರಾವಳಿ ಕುಲಾಲ-ಕುಂಬಾರ ಯುವ ವೇದಿಕೆ ಇತ್ತು. ಗ್ರಾಮ ಪಂಚಾಯತ್, ತಾ.ಪo, ಜಿ.ಪ೦, ಚುನಾವಣೆಗೆ ಯುವಕರನ್ನು ಪ್ರತೀ ವಿಧಾನಸಭಾ ಮಟ್ಟದಲ್ಲಿ ತಯಾರಿ ಮಾಡುವಲ್ಲೂ ಹೆಣಗಿ ಸಾಮಾಜಿಕ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಲಾಗುತ್ತಿದೆ. ಮೊದಮೊದಲು ಉಡುಪಿ ಹಾಗು ದ.ಕ ಜಿಲ್ಲೆಗೆೆ ಮಾತ್ರ ಸೀಮಿತವಾಗಿದ್ದ ವೇದಿಕೆ ಇಂದು ಮೈಸೂರು, ಕಾಸರಗೋಡು, ಕಾರವಾರ, ಕುಮುಟ, ಹೊನ್ನಾವರ, ಉತ್ತರಕನ್ನಡ, ಮಡಿಕೇರಿ, ಶಿವಮೊಗ್ಗ, ಚಿಕಮಗಳೂರು, ಬೆಂಗಳೂರು, ಮುಂಬಯಿ, ಮೈಸೂರು, ದುಬಾಯಿ, ಕತಾರ್, ಜಪಾನ್, ಅಮೇರಿಕಾ, ಮೈಸೂರುಗಳಲ್ಲಿ ನೆಲೆನಿಂತ ಕರಾವಳಿಯ ಕುಲಾಲ ಕುಂಬಾರರು ಈ ಸಂಘಟನೆಯ ಸಾಮಾಜಿಕ ಸೇವೆಯನ್ನು ಗುರುತಿಸಿ ನಮ್ಮೊಂದಿಗೆ ಕೈಜೊಡಿಸಿ ಸಹಾಯ ಸಹಕಾರ ಮಾಡುತ್ತಿರುವುದು ನಮಗೆಲ್ಲಾ ತಿಳಿದೇ ಇದೆ.
ಸಂಘಟನೆಗೆ 7 ವರ್ಷಗಳಾಗಿವೆ. ಸಾಕಷ್ಟು ನಾಯಕರು ದುಡಿದಿದ್ದಾರೆ. ಹಳೆ ಬೇರಿನ ಜೊತೆ ಹೊಸಚಿಗುರು ಬಂದಾಗ ಮರಸೊಗಸು. ಸಂಘಟನೆಗಳು ನಾಯಕತ್ವದ ವಿಚಾರದಲ್ಲಿ ಏಕಾಧಿಪತ್ಯವಾಗಬಾರದು. ಅದು ನಿಂತ ನೀರಾಗಬಾರದು. ಅದಕ್ಕಾಗಿ ವಿಭಾಗ, ಜಿಲ್ಲೆ, ಹೋಬಳಿ ಹಾಗೂ ವಿಧಾನ ಸಭಾ ಮಟ್ಟಗಳಲ್ಲಿ ಪದಾಧಿಕಾರಿಗಳ ಬದಾಲಾವಣೆಯ ಜೊತೆ ಯುವವೇದಿಕೆಯ ಪ್ರತಿಷ್ಠಿತ ಸರ್ವಜ್ಞ ಕ್ರಿಕೇಟ್ ಟ್ರೋಫಿಗಾಗಿ ಪ್ರತೀ ವರ್ಷದಂತೆ 15 ವಿಧಾನಸಭಾ ವ್ಯಾಪ್ತಿಯ ತಂಡಗಳು ಸೆಣಸಲು ತಯಾರಿ ನೆಡೆಸುತ್ತಿವೆ. ದುಡಿಯಲು ಯುವ ಚಳುವಳಿಯನ್ನು ಮುನ್ನಡೆಸಲು ಮತ್ತಷ್ಟು ಯುವಕರು ಮುಂದೆ ಬರಬೇಕು. ದುಡಿದವರಿಗೆ ಸ್ವಲ್ಪ ವಿಶ್ರಾಂತಿ ನೀಡಬೇಕು. ಮಾತು ಬೆಳ್ಳಿ ಮೌನ ಬಂಗಾರ. ಮಾತು ಕಡಿಮೆ ದುಡಿಮೆ ಹೆಚ್ಚು. ಇದು ನಮ್ಮ ಧ್ಯೇಯ ವಾಕ್ಯ, ಸರ್ವಜ್ಞ , ವಿವೇಕಾನಂದ. ಭಗತ್ ಸಿಂಗರ ಹೋರಾಟಗಳೇ ನಮಗೆ ಪ್ರೇರಣೆ. ಹಾಗಂತ ದೌರ್ಜನ್ಯ, ಶೋಷಣೆ ವಿಷಯ ಬಂದಾಗ ಕೈಕಟ್ಟಿ ಕೂರುವಂತಿಲ್ಲ. ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ.
ಸರ್ವೇಜನ ಸುಖೀನೋ ಭವಂತು
ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು.
ಸ್ಥಾಪಕರು ಹಾಗೂ ಗೌರವಾಧ್ಯಕ್ಷರು
ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆ, ಮಂಗಳೂರು.


